ಮಯಾಮಿ ನಗರದತ್ತ ಧಾವಿಸುತ್ತಿರುವ ಚಂಡಮಾರುತ ‘ಫ್ಲಾರೆನ್ಸ್’

Update: 2018-09-10 16:06 GMT

ಮಯಾಮಿ (ಅಮೆರಿಕ), ಸೆ. 10: ‘ಫ್ಲಾರೆನ್ಸ್’ ಚಂಡಮಾರುತವು ಅಮೆರಿಕದ ಪೂರ್ವ ಕರಾವಳಿಯತ್ತ ಧಾವಿಸುತ್ತಿದ್ದು, ಅದು ಅತ್ಯಂತ ಅಪಾಯಕಾರಿ ಚಂಡಮಾರುತವಾಗಿ ಮಾರ್ಪಾಡಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಷ್ಟ್ರೀಯ ಸುಂಟರಗಾಳಿ ಕೇಂದ್ರ ನಗರದ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.

‘‘‘ಫ್ಲಾರೆನ್ಸ್’ ಚಂಡಮಾರುತವು ಸೋಮವಾರದ ವೇಳೆಗೆ ಭೀಕರ ಚಂಡಮಾರುತವಾಗಿ ಪರಿವರ್ತನೆಗೊಳ್ಳುವುದೆಂದು ಊಹಿಸಲಾಗಿದೆ ಹಾಗೂ ಅದು ಗುರುವಾರದವರೆಗೆ ಅತ್ಯಂತ ಅಪಾಯಕಾರಿಯಾಗಿಯೇ ಇರುವುದೆಂದು ನಿರೀಕ್ಷಿಸಲಾಗಿದೆ’’ ಎಂದು ರವಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಕೇಂದ್ರ ತಿಳಿಸಿದೆ.

ಚಂಡಮಾರುತವು ಬರ್ಮುಡದ ಆಗ್ನೇಯಕ್ಕೆ 1,160 ಕಿ.ಮೀ. ದೂರದಲ್ಲಿ ಸೃಷ್ಟಿಯಾಗಿದ್ದು, ಬಲಗೊಳ್ಳುತ್ತಿರುವುದನ್ನು ತನ್ನ ಚಂಡಮಾರುತ ಪತ್ತೆ ವಿಮಾನವು ಪತ್ತೆಹಚ್ಚಿದೆ ಎಂದು ಅದು ಹೇಳಿದೆ.

 ಚಂಡಮಾರುತದ ವ್ಯಾಪ್ತಿಯಲ್ಲಿರುವ ರಾಜ್ಯಗಳಾದ ನಾರ್ತ್ ಮತ್ತು ಸೌತ್ ಕ್ಯಾರಲೈನ ಹಾಗೂ ವರ್ಜೀನಿಯಗಳು, ಕ್ಷಿಪ್ರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜನರಿಗೆ ಎಚ್ಚರಿಕೆಗಳನ್ನು ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News