ಭಾರತ ಎರಡನೇ ಇನಿಂಗ್ಸ್ 58/3

Update: 2018-09-10 18:21 GMT

ಲಂಡನ್, ಸೆ.10: ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 464 ರನ್‌ಗಳ ಸವಾಲನ್ನು ಪಡೆದಿರುವ ಭಾರತ ಜೇಮ್ಸ್ ಆ್ಯಂಡರ್ಸನ್ ದಾಳಿಗೆ ತತ್ತರಿಸಿ ಮೂರು ವಿಕೆಟ್‌ಗಳನ್ನು ಬೇಗನೆ ಕೈ ಚೆಲ್ಲಿದೆ. ದಿನದಾಟದಂತ್ಯಕ್ಕೆ ಭಾರತ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 58 ರನ್ ಗಳಿಸಿದೆ. 46 ರನ್ (51ಎ, 8ಬೌ) ಗಳಿಸಿರುವ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಮತ್ತು 10 ರನ್ ಗಳಿಸಿರುವ ಅಜಿಂಕ್ಯ ರಹಾನೆ ಔಟಾಗದೆ ಅಂತಿಮ ದಿನಕ್ಕೆ ಹೋರಾಟವನ್ನು ಕಾಯ್ದಿರಿಸಿದ್ದಾರೆ. ಶಿಖರ್ ಧವನ್(1), ಚೇತೇಶ್ವರ ಪೂಜಾರ(0) ಮತ್ತು ವಿರಾಟ್ ಕೊಹ್ಲಿ(0) ಬೇಗನೆ ಔಟಾಗಿದ್ದಾರೆ. ಗೆಲುವಿಗೆ ಭಾರತ ಇನ್ನೂ 406 ರನ್ ಗಳಿಸಬೇಕಿದ್ದು, ಒತ್ತಡಕ್ಕೆ ಸಿಲುಕಿದೆ. ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ 23ಕ್ಕೆ 2 ಮತ್ತು ಸ್ಟುವರ್ಟ್ ಬ್ರಾಡ್ 17ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News