ಸ್ವಾಮಿ ವಿವೇಕಾನಂದ ನವಭಾರತದ ಕನಸು ಕಂಡ ಸನ್ಯಾಸಿ

Update: 2018-09-11 08:10 GMT

ನಸಮುದಾಯದ ಮೇಲಿನ ರಾಜರ ನಿರಂಕುಶ ಅಧಿಕಾರವನ್ನು ಬ್ರಾಹ್ಮಣ ವರ್ಗ ಶಿಥಿಲಗೊಳಿಸುತ್ತಿತ್ತು. ಅಧ್ಯಾತ್ಮದ ಹೆಸರಿನಲ್ಲಿ ಜನರ ಮೇಲೆ ನಿರಂಕುಶ ಅಧಿಕಾರ ಚಲಾಯಿಸುತ್ತಿದ್ದ ಬ್ರಾಹ್ಮಣವರ್ಗದ ಮೇಲೆ ಕ್ಷತ್ರಿಯರು ಹಿಡಿತ ಸಾಧಿಸುತ್ತಿದ್ದರು. ಹೀಗೆ ಪ್ರಾಚೀನ ಭಾರತವು ಅನೇಕ ಶತಮಾನಗಳವರೆಗೆ ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಣಗಳವರ ಮಹತ್ವಾಕಾಂಕ್ಷೆಯ ರಣರಂಗವಾಗಿತ್ತು ಎಂಬುದನ್ನು ವಿವೇಕಾನಂದರು ಗುರುತಿಸಿದ್ದಾರೆ. ಈ ಮೇಲರಿಮೆಯನ್ನು ಅಂತ್ಯಗೊಳಿಸಿ ನವ ಭಾರತ ನಿರ್ಮಾಣದ ಕನಸುಕಂಡವರಲ್ಲಿ ವಿವೇಕಾನಂದರು ಮೊದಲಿಗ ರಾಗಿದ್ದಾರೆ.

‘‘ಅನಿಷ್ಟಗಳನ್ನು ಹೊರತುಪಡಿಸಿದ ಬ್ರಾಹ್ಮಣರ ಜ್ಞಾನ, ಕ್ಷತ್ರಿಯರ ಸಂಸ್ಕೃತಿ, ವೈಶ್ಯರ ವಿತರಣಾ ವ್ಯವಸ್ಥೆ ಮತ್ತು ಶೂದ್ರರ ಸಮಾನತೆಯ ಆದರ್ಶದಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಆದರ್ಶ ರಾಜ್ಯ ದ ಸ್ಥಾಪನೆ ಮಾಡಬಹುದು’’ ಎಂದು ಹೇಳಿದ ವಿವೇಕಾನಂದರು, ‘‘ಆದರೆ ಇದು ಸಾಧ್ಯವೇ?’’ ಎನ್ನುತ್ತಾರೆ.

‘‘ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ತಮ್ಮ ಆಳ್ವಿಕೆ ಯನ್ನು ಮುಗಿಸಿದ್ದಾರೆ. ಈಗ ಕೊನೆಯಲ್ಲಿರುವವರ ಅಂದರೆ ಶೂದ್ರರ ಕಾಲ. ಅದನ್ನು ಅವರು ಪಡೆಯಲೇ ಬೇಕು. ಅವರ ದಿನಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ಸ್ವಾಮಿ ವಿವೇಕಾನಂದರು ಭವಿಷ್ಯ ನುಡಿದಿದ್ದಾರೆ. ‘‘ರೊಟ್ಟಿ ಇಲ್ಲದೆ ಇರುವುದಕ್ಕಿಂತ ತುಣುಕುರೊಟ್ಟಿ ಇರುವುದು ಒಳ್ಳೆಯದು ಎಂಬ ಕಾರಣಕ್ಕೆನಾನು ಸಮಾಜವಾದಿ; ಅದೊಂದು ಪರಿಪೂರ್ಣವ್ಯವಸ್ಥೆ ಎಂಬ ಭಾವನೆಯಿಂದ ಅಲ್ಲ’’ ಎಂದು ಅವರು ಹೇಳಿದ ಸಂದರ್ಭದಲ್ಲಿ ಭಾರತದಲ್ಲಿ ಯಾವ ನಾಯಕನಿಗೂ ಸಮಾಜವಾದದ ಕನಸು ಕೂಡ ಬಿದ್ದಿದ್ದಿಲ್ಲ. ‘‘ನಾನೊಬ್ಬ ಸಮಾಜವಾದಿ’’ ಎಂದು ಘೋಷಿಸಿದ ಮೊದಲ ಭಾರತೀಯಅವರಾಗಿದ್ದಾರೆ.

ಮಾನವ ಕುಲದ ನೈತಿಕ, ಐಹಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಸ್ವಾಮಿ ವಿವೇಕಾನಂದರು ತಮ್ಮ ಬದುಕನ್ನು ಮುಡಿಪಿಟ್ಟಿದ್ದರು. ಅವರು ಸಹಜವಾಗಿಯೆ ವಿಶ್ವಮಾನವರಾಗಿದ್ದರು. ‘‘ವಿಶ್ವವೇ ನನ್ನ ಮನೆ’’ ಎಂದು ಅವರು ಹೇಳುತ್ತಿದ್ದರು. ವಿಶ್ವದ ದುಃಖಾರ್ಥರಿಗೆ ಅವರ ಹೃದಯ ಮಿಡಿಯುತ್ತಲೇ ಇತ್ತು. ಸುಲಿಗೆ ಇಲ್ಲದ ರಾಜಕೀಯ ವ್ಯವಸ್ಥೆ ಈ ಜಗತ್ತಿನಲ್ಲಿ ರೂಪುಗೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು. ಅಂಥ ಒಂದು ವ್ಯವಸ್ಥೆ ರಶ್ಯಾ ಅಥವಾ ಚೀನಾದಿಂದ ಹೊರಹೊಮ್ಮುವ ಸಾಧ್ಯತೆ ಇದೆ ಎಂದು 1893ರಲ್ಲೇ ತಿಳಿಸಿದ್ದರು.

ಧಾರ್ಮಿಕ ವಿಧಿ ವಿಧಾನಗಳ ಮಾರ್ಗ, ಅಧ್ಯಾತ್ಮ ಮಾರ್ಗ ಮತ್ತು ಭೌತಿಕವಾದಿ ಮಾರ್ಗ ಎಂಬ ಮೂರು ಮಾರ್ಗಗಳನ್ನು ವಿವೇಕಾನಂದ ರು ದೇಶದ ಚರಿತ್ರೆಯಲ್ಲಿ ಗುರುತಿಸಿದ್ದಾರೆ. ಈ ತ್ರಿಕೋನ ಹೋರಾಟ ದಲ್ಲಿ ಅವರು ಅಧ್ಯಾತ್ಮ ಮಾರ್ಗ ಹಿಡಿದರೂ ಅದು ಶುಷ್ಕ ವೇದಾಂತ ವಾಗಿರಲಿಲ್ಲ. ಐಹಿಕ ಬದುಕಿನ ವಾಸ್ತವಗಳಿಗೆ ಉತ್ತರಿಸದೆ ವೇದಾಂತ ಮಾತನಾಡುವುದು ಅರ್ಥಹೀನ ಎಂಬುದನ್ನು ಅವರು ಸಾರಿ ಹೇಳಿದ್ದರು.
 ಇಕ್ಲೆಕ್ಟಿಸಿಸಂ ಪರಿಕಲ್ಪನೆಯಿಂದ ಮಾತ್ರ ಇಂತಹ ಒಂದು ಸಮಾಜ ವನ್ನು ಮುಕ್ತಗೊಳಿಸಬಹುದು ಎಂಬುದು ಅವರ ಆಶಯವಾಗಿತ್ತು. ಇಕ್ಲೆಕ್ಟಿಸಿಸಂ ಅಂದರೆ ಸತ್ಯವನ್ನು ವಿವಿಧರೂಪದಲ್ಲಿ ಕಾಣುವುದು. ವಿವಿಧ ಮೂಲಗಳಿಂದ ಬರುವ ಚಿಂತನೆಗಳನ್ನು ಒಗ್ಗೂಡಿಸುವುದು. ಎಲ್ಲೆಡೆ ಯಿಂದ ಬರುವ ಉದಾತ್ತ ವಿಚಾರಗಳನ್ನು ಸ್ವೀಕರಿಸುವುದು. ನಮ್ಮ ಉಪನಿಷತ್ತುಗಳು (ವೇದಾಂತ) ಹೇಳುವ ಅದ್ವೈತವು ಈ ಇಕ್ಲೆಕ್ಟಿಸಿಸಂ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ.

ವರ್ಣಾಶ್ರಮ ಪದ್ಧತಿ ನಂಬಿದ್ದು ಹೊರಹಾಕುವಿಕೆಯನ್ನು. ವಿವೇಕಾನಂದರು ನಂಬಿದ್ದು ಮತ್ತು ಆಚರಿಸಿದ್ದು ಒಳಗೊಳ್ಳುವಿಕೆ ಯನ್ನು. ‘‘ಹಿಂದೆ ಇದ್ದ ಧರ್ಮಗಳನ್ನೆಲ್ಲ ಸ್ವೀಕರಿಸುತ್ತೇನೆ. ಮುಂದೆ ಬರುವುದನ್ನು ಸ್ವೀಕರಿಸುವುದಕ್ಕೆ ಹೃದಯ ತೆರೆದಿರುತ್ತೇನೆ. ಮಸೀದಿಗೆ ಹೋಗುತ್ತೇನೆ. ಚರ್ಚಿನಲ್ಲಿ ಶಿಲುಬೆಯ ಎದುರು ತಲೆಬಾಗುತ್ತೇನೆ. ಬುದ್ಧವಿಹಾರಕ್ಕೆ ಹೋಗಿ ಬೌದ್ಧಧರ್ಮದ ತತ್ತ್ವಗಳಿಗೆ ಶರಣೆನ್ನುತ್ತೇನೆ. ಹಿಂದೂಗಳೊಂದಿಗೆ ಅರಣ್ಯಕ್ಕೆ ಹೋಗಿ ಎಲ್ಲೆಲ್ಲಿಯೂ ಬೆಳಗುತ್ತಿರುವ ಆ ಪರಂಜ್ಯೋತಿ ದರ್ಶನಧ್ಯಾನಮಗ್ನನಾಗುತ್ತೇನೆ’’ ಎಂಬ ವಿವೇಕಾನಂದ ರ ಮಾತು ಆಧುನಿಕ ಭಾರತಕ್ಕೆ ದಿಕ್ಸೂಚಿಯಾಗಿದೆ.

ಸದೃಢ ಭಾರತದ ನಿರ್ಮಾಣಕ್ಕಾಗಿ ‘‘ಇಸ್ಲಾಮಿನ ದೇಹ ಮತ್ತು ವೇದಾಂತದ ಮೆದುಳು’’ ಅವಶ್ಯವಾಗಿದೆ ಎಂಬುದು ಅವರ ವಾದವಾ ಗಿತ್ತು. ಈ ಎರಡು ಮಹಾನ್ ವ್ಯವಸ್ಥೆಗಳ ಮಿಲನದ ಮೂಲಕವೇ ಭಾರತ ಅವ್ಯವಸ್ಥೆ ಮತ್ತು ಸಂಘರ್ಷಗಳಿಂದ ಹೊರಬಂದು ವೈಭವಪೂರ್ಣ ವಾಗಿ ತಲೆ ಎತ್ತಿ ನಿಲ್ಲುವುದನ್ನು ನನ್ನ ಮನದ ಕಣ್ಣಿನಿಂದ ನೋಡು ವುದಾಗಿ ಅವರು ತಿಳಿಸಿ ಭಾರತದ ಭಾವೈಕ್ಯದ ಮೂಲಮಂತ್ರವನ್ನು ಸೂಚಿಸಿದ್ದಾರೆ. ಶೂದ್ರರನ್ನು ಮತ್ತು ಪಂಚಮರನ್ನು ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯವಸ್ಥೆಯಿಂದ ಹೊರಗಿಟ್ಟಿದ್ದನ್ನು ಅವರು ಬದುಕಿನುದ್ದಕ್ಕೂ ವಿರೋಧಿಸಿದರು. ಬ್ರಾಹ್ಮಣರ ಪ್ರಭಾವ, ಕ್ಷತ್ರಿಯರ ಶೌರ್ಯ ಮತ್ತು ವೈಶ್ಯರ ಸಂಪತ್ತಿನ ಹಿಂದೆ ಶೂದ್ರರ ದೈಹಿಕ ಶ್ರಮವಿದೆ ಎಂದು ವಿವೇಕಾನಂದರು ಹೇಳಿದ್ದಾರೆ. ಬ್ರಾಹ್ಮಣ ಮತ್ತು ಇತರ ಉಚ್ಚ ವರ್ಣದವರು ಕೆಳಗಿಳಿದು ಶೂದ್ರರು ಮೇಲೆ ಬರುವರು ಎಂದು ಭವಿಷ್ಯ ನುಡಿದಿದ್ದಾರೆ.

‘‘ಭಾರತದಲ್ಲಿ ಬಡವರಿಗೆ, ಕೆಳಜಾತಿಯವರಿಗೆ, ಪಾಪದ ಜನರಿಗೆ ಗೆಳೆಯರಿಲ್ಲ. ಸಹಾಯಹಸ್ತ ಚಾಚುವವರಿಲ್ಲ, ಅವರೆಷ್ಟೇ ಪ್ರಯತ್ನಿಸಿ ದರೂ ಮೇಲೇಳಲಿಕ್ಕಾಗುತ್ತಿಲ್ಲ. ಅವರು ಪ್ರತಿದಿನವೂ ಹತಾಶರಾಗಿ ರಸಾತಳಕ್ಕೆ ಇಳಿಯುತ್ತಲೇ ಇದ್ದಾರೆ. ಕ್ರೂರ ಸಮಾಜ ತಮ್ಮ ಮೇಲೆ ಹೊಡೆತಗಳನ್ನು ಹಾಕುತ್ತಲೇ ಇದೆ ಎಂಬ ಭಾವನೆಯನ್ನು ಹೊಂದಿ ದ್ದಾರೆ. ಯಾವಾಗ ಹೊಡೆತ ಬೀಳುವುದು ಎಂಬುದನ್ನು ಅವರು ಅರಿಯದವರಾಗಿದ್ದಾರೆ. ತಾವೂ ಮನುಷ್ಯರು ಎಂಬುದನ್ನೇ ಅವರು ಮರೆತಿದ್ದಾರೆ’’ ಎಂದು ವಿವೇಕಾನಂದರು ಹೇಳುವಾಗ ನಮ್ಮ ಚರಿತ್ರೆಯಲ್ಲಿನ ಕ್ರೌರ್ಯದ ಅರಿವಾಗದೆ ಇರದು. ಭಾರತೀಯ ಸಮಾಜದಲ್ಲಿ ಈ ಕ್ರೌರ್ಯ ಒಂದಿಲ್ಲೊಂದು ರೀತಿಯಲ್ಲಿ ಆಗಾಗ ತನ್ನ ಅಸ್ತಿತ್ವವನ್ನು ತೋರುತ್ತಲೇ ಇರುತ್ತದೆ.

‘‘ನಮ್ಮ ದೇಶದಲ್ಲಿ ಯಾರಾದರೂ ಕೆಳಜಾತಿ ಯಲ್ಲಿ ಜನಿಸಿದರೆ ಅವರ ಕಥೆ ಮುಗಿದಂತೆಯೇ. ಅವರಿಗೆ ಯಾವುದೇ ಭವಿಷ್ಯವಿಲ್ಲ. ಇದೆಂಥ ಅತ್ಯಾಚಾರ?’’ ಎಂದು ಅವರು ಪ್ರಶ್ನಿಸಿ ದ್ದಾರೆ. ‘‘ನಾವು ಮನುಷ್ಯರೆ? ಅವರ ಬದುಕಿ ಗಾಗಿ, ಅವರ ಅಭಿವೃದ್ಧಿಗಾಗಿ ನಾವೇನು ಮಾಡುತ್ತಿದ್ದೇವೆ?’’ ಎಂದು ಸಾತ್ವಿಕ ಕೋಪ ವ್ಯಕ್ತಪಡಿಸಿದ್ದಾರೆ. ‘‘ಆತ್ಮವತ್ ಸರ್ವ ಭೂತೇಷು (ಎಲ್ಲ ಜೀವಿಗಳನ್ನು ನಮ್ಮ ಆತ್ಮದ ಭಾಗವಾಗೇ ಕಾಣುವುದು) ಎಂಬುದು ಧರ್ಮ ಗ್ರಂಥಗಳಿಗೆ ಮಾತ್ರವೇ ಸೀಮಿತವೇ?’’ ಎಂದು ಮುಂತಾದ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ‘‘ಲಕ್ಷಾಂತರ ಜನ ನಿರ್ಗತಿಕರು ಮಹುವಾ ಸಸ್ಯವನ್ನು ತಿಂದು ಬದುಕುತ್ತಿದ್ದಾರೆ. ಲಕ್ಷಾಂತರ ಜನ ಸಾಧುಗಳು ಮತ್ತು ಬ್ರಾಹ್ಮಣರು ಈ ಬಡ ಜನರ ರಕ್ತ ಹೀರುತ್ತಿದ್ದಾರೆ. ಇದೊಂದುದೇಶವೋ ನರಕವೋ? ಇದು ಧರ್ಮವೋ ಅಥವಾ ಭೂತನೃತ್ಯವೋ?’’ ಎಂದು ವಿವೇಕಾನಂದರು ನೋವು ತೋಡಿ ಕೊಂಡಿದ್ದಾರೆ.

‘‘ತುಳಿತಕ್ಕೊಳಗಾದವರಿಗೆ ಮತ್ತು ಬಡವರಿಗೆ ಉದ್ಧಾರ ಮಾಡುವ ರೀತಿಯಲ್ಲಿ ಭಾರತದಲ್ಲಿ ಮಹಮ್ಮದೀಯರ ವಿಜಯವಾಯಿತು. ಆ ಕಾರಣದಿಂದಲೇ ನಮ್ಮ ಐದನೇ ಒಂದು ಭಾಗದಷ್ಟು ಜನ ಮಹಮದೀ ಯರಾದರು. ಇದನ್ನೆಲ್ಲ ಮಾಡಿದ್ದು ಖಡ್ಗವಲ್ಲ. ಖಡ್ಗ ಮತ್ತು ಬೆಂಕಿಯಿಂದ ಇದನ್ನೆಲ್ಲ ಸಾಧಿಸಲಾಯಿತು ಎಂದು ಯೋಚಿಸುವುದು ಹುಚ್ಚುತನದ ಪರಮಾವಧಿಯಾಗುತ್ತದೆ’’ ಎಂದು ವಿವೇಕಾನಂದರುಸ್ಪಷ್ಟಪಡಿಸಿದ್ದಾರೆ. ‘‘ಜಮೀನುದಾರರು, ಪುರೋಹಿತಶಾಹಿ ಗಳಿಂದ ವಿಮೋಚನೆ ಹೊಂದುವುದಕ್ಕಾಗಿ ಆ ಜನ ಮತಾಂತರಗೊಂಡರು. ಬಂಗಾಲದಲ್ಲಿ ಬಹಳಷ್ಟು ಜಮೀನುದಾರರು ಇದ್ದ ಕಾರಣಕ್ಕೇ ಅಲ್ಲಿ ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಿಗಿದ್ದಾರೆ’’ ಎಂಬ ಐತಿಹಾಸಿಕ ಸತ್ಯದ ಕಡೆಗೆ ವಿವೇಕಾನಂದರು ನಮ್ಮ ಗಮನ ಹರಿಸುತ್ತಾರೆ.

‘‘ಟ್ರಾವನ್‌ಕೋರ್‌ನಲ್ಲಿ ಬ್ರಾಹ್ಮಣರೇ ಭೂಮಾಲಕರಾಗಿದ್ದರು. ಕೆಳಜಾತಿಯ ಹೆಣ್ಣುಮಕ್ಕಳು ಮತ್ತು ರಾಜಮನೆತನದ ಮಹಿಳೆಯರು ಕೂಡ ಬ್ರಾಹ್ಮಣರ ಹೆಂಡಂದಿರಾಗಿ ಬದುಕುವುದು ಮಹಾ ಗೌರವದ ಸಂಕೇತವೆಂದು ಭಾವಿಸಿದ್ದರು. ಇಂಥ ಕಾರಣಗಳಿಂದಾಗಿ ಆ ಭಾಗದಲ್ಲಿನ ನಾಲ್ಕನೇ ಒಂದು ಭಾಗದಷ್ಟು ಜನ ಕ್ರೈಸ್ತಧರ್ಮಕ್ಕೆ ಮತಾಂತರ ಗೊಂಡರು’’ ಎಂದು ವಿವೇಕಾನಂದರು ವಿವರಿಸಿದ್ದಾರೆ. ಜನ ಸಾಮಾನ್ಯರನ್ನು ಕಡೆಗಣಿಸಿದ್ದೇ ಭಾರತ ಹಿಂದುಳಿಯಲು ಕಾರಣ ಎಂದು ತಿಳಿಸಿದ್ದಾರೆ.

‘‘ಶೂದ್ರ (ದುಡಿಯುವ) ವರ್ಗದ ಏಳ್ಗೆಯ ಕಾಲ ಬರುವುದು. ಎಲ್ಲ ದೇಶಗಳ ಶೂದ್ರರು ತಮ್ಮ ಶೂದ್ರತ್ವವನ್ನು ಉಳಿಸಿಕೊಂಡೇ ಉತ್ಕೃಷ್ಟತೆ ಯನ್ನು ಹೊಂದುವರು. ಪಾಶ್ವಿಮಾತ್ಯ ಜಗತ್ತಿನಲ್ಲಿ ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ’’ ಎಂದು ವಿವೇಕಾನಂದರು 19ನೇ ಶತಮಾನದಲ್ಲೇ ತಿಳಿಸಿದ್ದಾರೆ. ‘‘ಸಮಾಜವಾದ, ಅರಾಜಕತಾವಾದ, ಅನಾತ್ಮವಾದ, ರಾಜಸತ್ತೆ ಮತ್ತು ಧರ್ಮಸತ್ತೆಯನ್ನು ಅಲ್ಲಗಳೆಯುವ ವಾದ ಮುಂತಾದ ವಾದಗಳು ಸಾಮಾಜಿಕ ಕ್ರಾಂತಿಯ ಮುಂಚೂಣಿ ಯಲ್ಲಿರುವುವು’’ ಎಂಬ ಅವರ ಭವಿಷ್ಯ ನಿಜವಾಗಿದೆ.

‘‘ಕೊನೆಯಲ್ಲಿ ದುಡಿಯುವವರ (ಶೂದ್ರರ) ಆಳ್ವಿಕೆ ಬರುವುದು. ಆಗ ಬೃಹತ್ ಪ್ರಮಾಣದಲ್ಲಿ ಐಹಿಕ ಅಭ್ಯುದಯವಾಗುವುದು. ಆದರೆ ಸಾಂಸ್ಕೃತಿಕ ಮಟ್ಟ ಇಳಿಯುವ ಆತಂಕವಿದೆ’’ ಎಂದು ಅವರು ಎಚ್ಚರಿಸಿದ್ದಾರೆ. ‘‘ಐರೋಪ್ಯ ರಾಷ್ಟ್ರಗಳ ಭೌತಿಕ ಅತ್ಯಾಚಾರ ಅತಿಶಯ ವಾಗಿದೆ. ಕೆಲಸ ಮಾಡದೆ ಲಕ್ಷಾಂತರ ಜನರಿಂದ ಕೆಲಸ ಮಾಡಿಸಿಕೊ ಳ್ಳುವ ಕೆಲವರ ಕೈಯಲ್ಲಿ ದೇಶಗಳ ಸಂಪತ್ತು ಮತ್ತು ಅಧಿಕಾರ ಇದೆ. ಈ ಶಕ್ತಿಯ ಮೂಲಕ ಅವರು ಇಡೀ ಜಗತ್ತಿನ ತುಂಬ ರಕ್ತಪಾತ ಮಾಡ ಬಲ್ಲರು’’ ಎಂದು ಯುವ ವಿವೇಕಾನಂದರು ಹೇಳಿದ್ದು ಮೊದಲ ಮಹಾಯುದ್ಧ ಸಂಭವಿಸುವ ಮೂರು ದಶಕಗಳಿಗೆ ಮುಂಚೆ ಎಂಬುದನ್ನು ಮರೆಯಬಾರದು. ವಿದೇಶ ಪ್ರವಾಸದ ಆರಂಭದಲ್ಲಿ ವಿವೇಕಾನಂದರಿಗೆ ಪಾಶ್ಚಿಮಾತ್ಯ ಅಭಿವೃದ್ಧಿಪಥ ಆಕರ್ಷಣೀಯ ಎನಿಸಿದರೂ ಬಹುಬೇಗ ಅವರು ಅದರ ಸುಲಿಗೆಯ ಅಭಿವೃದ್ಧಿ ಪಥವನ್ನು ಅರಿತು ಟೀಕಿಸತೊಡಗಿದರು. ತದನಂತರ ಸರ್ವರಿಗೂ ಸಮಬಾಳು ಎಂಬುದು ಅವರ ಬದುಕಿನ ಮಂತ್ರವಾಯಿತು.

ಭಾರತ ತೀವ್ರತರವಾದ ಸಮಾಜೋ ರಾಜಕೀಯ ಬದಲಾವಣೆ ಯ ತಿರುವಿನಲ್ಲಿ ಬಂದು ನಿಂತ ಸಂದರ್ಭದಲ್ಲಿ ರಾಷ್ಟ್ರಧರ್ಮ ದೃಷ್ಟಾರ ವಿವೇಕಾನಂದರು ಮಹತ್ವದ ಪಾತ್ರವನ್ನು ನಿರ್ವಹಿಸಿದರು. ಚಾತು ರ್ವರ್ಣ ಪದ್ಧತಿ, ಅಸ್ಪಶ್ಯತೆ, ಜಾತಿ ಮತ್ತು ವಿಜಾತಿಗಳಿಂದ ದೇಶವನ್ನು ಅಧೋಗತಿಗೆ ಇಳಿಸಿದ್ದ ಪುರೋಹಿತಶಾಹಿಗಳು ಅವರ ಕ್ರಾಂತಿಕಾರಿ ವಿಚಾರಗಳಿಂದ ಬೆಚ್ಚಿಬಿದ್ದರು. ಈ ಎಲ್ಲ ಅನಿಷ್ಟಗಳಿಂದ ಹೊರತಾದ ಸಮಾನತೆಯ ಆಧಾರದ ಮೇಲೆ ಭಾವೈಕ್ಯದಿಂದ ಕೂಡಿದ ಸದೃಢ ದೇಶ ವನ್ನು ಕಟ್ಟುವುದು ಅವರ ಉದ್ದೇಶವಾಗಿತ್ತು. ಅದ್ವೈತ ತತ್ತ್ವದ ಅರಿವಿ ನೊಂದಿಗೆ ಜಾತಿಗಳ ವಿನಾಶ ಮತ್ತು ಹಿಂದೂ ಮುಸ್ಲಿಂ ಭಾವೈಕ್ಯ ಅವರ ಕನಸಾಗಿತ್ತು.

ಅದ್ವೈತವು ಅಂತಿಮ ಧರ್ಮವಾಗಿದೆ. ಇದು ಎಲ್ಲ ಧರ್ಮಗಳನ್ನೂ ಒಳಗೊಳ್ಳುತ್ತದೆ; ಎಲ್ಲ ಜನಾಂಗಗಳನ್ನೂ ಒಳಗೊಳ್ಳುತ್ತದೆ. ಪ್ರತಿಯೊಬ್ಬ ರಲ್ಲಿ ಆತ್ಮಶಕ್ತಿ ಇದೆ. ಎಲ್ಲರೂ ಸಮಾನರಾಗಿದ್ದಾರೆ. ಆದರೆ ಕೆಲವರಿಗೆ ಅವಕಾಶಗಳು ಲಭಿಸದ ಕಾರಣ ಹಿಂದುಳಿದಿದ್ದಾರೆ. ಕೆಲವರು ಉಚ್ಚಕುಲದಲ್ಲಿ ಹುಟ್ಟಿದ್ದಾರೆ; ಕೆಲವರು ಕೀಳು ಕುಲದಲ್ಲಿ ಹುಟ್ಟಿದ್ದಾರೆ ಎಂಬ ಅರ್ಥಹೀನ ವಾದಕ್ಕೆ ವೇದಾಂತದಲ್ಲಿ ಸ್ಥಾನವಿಲ್ಲ. ಅದೇ ರೀತಿ ಒಂದು ದೇಶ ಇನ್ನೊಂದು ದೇಶಕ್ಕಿಂತ ಹೆಚ್ಚಿನದು ಎಂದು ಭಾವಿಸು ವುದು ಅರ್ಥಹೀನವಾದುದು. ಮಾನವಕುಲದ ಸೇವೆಯೆ ದೇವರ ಪೂಜೆ. ದೇವರು ಎಲ್ಲರ ಆತ್ಮದಲ್ಲಿದ್ದಾನೆ ಎಂಬುದನ್ನು ವಿವೇಕಾನಂದರು ಪ್ರತಿಪಾದಿಸಿದರು.

ಇವರ ಪ್ರಭಾವಕ್ಕೆ ಒಳಗಾದವರಲ್ಲಿ ಬಾಲಗಂಗಾಧರ ತಿಲಕ್, ಅರವಿಂದ, ಮಹಾತ್ಮಾ ಗಾಂಧೀಜಿ, ರವೀಂದ್ರನಾಥ್‌ಟಾಗೋರ್, ಸುಭಾಸ್‌ಚಂದ್ರ ಬೋಸ್ ಮುಂತಾದ ಮಹಾನ್ ರಾಷ್ಟ್ರನಾಯಕರು ಪ್ರಮುಖರಾಗಿದ್ದಾರೆ. ಸ್ವದೇಶಿ ಚಳವಳಿ, ಜಾತ್ಯತೀತ ನಿಲುವು, ಅಸ್ಪಶ್ಯತೆ ವಿರುದ್ಧದ ಹೋರಾಟ ಮತ್ತು ಸಮಾಜವಾದಿ ಪ್ರಜ್ಞೆಯ ಹಿಂದೆ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಸುಹೊಕ್ಕಾಗಿವೆ. ಭಾರತದ ಆಧ್ಯಾತ್ಮಿಕ ಪರಂಪರೆ, ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಚಿಂತನೆ ಹಾಗೂ ಚಳವಳಿಗಳ ಮೂಲಕ ವಿವೇಕಾನಂದರು ಸಮಾಜ ವಾದಿ ಚಿಂತನೆಯ ಬೀಜಗ ಳನ್ನು ಭಾರತೀಯರ ಮನೋ ಭೂಮಿಕೆಯಲ್ಲಿ ಬಿತ್ತಿದರು.

‘‘ಪುರಾತನವಾದ ಜಾತಿ ವ್ಯವಸ್ಥೆಯಿಂದಾಗಿ ಶೂದ್ರರನ್ನು ಹತ್ತಿಕ್ಕಿ, ಅವರು ಕೈಕಾಲುಗಳನ್ನು ಅಲುಗಾಡಿಸದ ಹಾಗೆ ಮಾಡ ಲಾಯಿತು. ಅವರು ಯಾವು ದೇ ಆಸ್ತಿಯನ್ನು ಗಳಿಸದ ಹಾಗೆ ಮತ್ತು ಜ್ಞಾನ ಹಾಗೂ ಶಿಕ್ಷಣ ವನ್ನು ಪಡೆಯದ ಹಾಗೆ ನೋಡಿಕೊಳ್ಳಲಾಯಿತು. ಶೂದ್ರವರ್ಗದಲ್ಲಿ ಯಾರಾದ ರೂ ಮೇಧಾವಿಗಳು ಕಂಡು ಬಂದರೆ ಅವನನ್ನು ಗೌರವಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಚಾಣಾಕ್ಷತೆಯನ್ನು ಪ್ರಭಾವಿ ಮೇಲ್ವ ರ್ಗದವರು ಮಾಡುತ್ತಾರೆ. ಆ ಮೂಲಕ ಆ ಮೇಧಾವಿ ಶೂದ್ರನ ಸಂಪತ್ತು ಮತ್ತು ಜ್ಞಾನಸಂಪತ್ತು ಇತರ ಶೂದ್ರರಿಗೆ ದಕ್ಕ ದಂತೆ ನೋಡಿಕೊಳ್ಳುತ್ತಾರೆ’’ ಎಂದು ವಿವೇಕಾನಂದರು ವಿಷಾದ ವ್ಯಕ್ತಪಡಿಸಿ ದ್ದಾರೆ.

ಭಾರತದ ರಾಜರು ಎಷ್ಟೊಂದು ಹೇಡಿಗಳಿದ್ದರು ಎಂಬುದಕ್ಕೆ ವಿವೇಕಾ ನಂದರು ತಮ್ಮ ಬ್ರಿಟಿಷ್ ಗೆಳೆಯ ಜನ ರಲ್ ಸ್ಟ್ರಾಂಗ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾರೆ. ಸಿಪಾಯಿ ಬಂಡಾಯ ಎಂದು ಬ್ರಿಟಿಷರು ಹೇಳುವ ಭಾರತಸ್ವಾತಂತ್ರ್ಯದ ಪ್ರಥಮ ಯುದ್ಧದಲ್ಲಿ ಜನರಲ್ ಸ್ಟ್ರಾಂಗ್ ಭಾಗವಹಿಸಿದ್ದರು. ಸಿಪಾಯಿಗಳು ಬ್ರಿಟಿಷರಿಂದಲೇ ತರಬೇತಿ ಪಡೆದವರಾಗಿದ್ದರು. ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿದ ವರಾಗಿದ್ದರು. ಬೃಹತ್ ಪ್ರಮಾಣದಲ್ಲಿ ಆಹಾರಧಾನ್ಯವೂ ಅವರ ಬಳಿ ಇತ್ತು. ಆದರೂ ಅವರು ಸೋತದ್ದೇಕೆ ಎಂಬುದನ್ನು ವಿವೇಕಾನಂದರಿಗೆ ಜನರಲ್ ಸ್ಟ್ರಾಂಗ್ ವಿವರಿಸುತ್ತಾರೆ. ಭಾರತದ ಯುದ್ಧನಾಯಕರಾರೂ ಯುದ್ಧದಲ್ಲಿ ಮುಂದೆ ಬರಲಿಲ್ಲ. ಸುರಕ್ಷಿತ ಸ್ಥಳದಲ್ಲಿ ಕುಳಿತು ಸಿಪಾಯಿಗಳಿಗೆ ಹುರಿದುಂಬಿಸುವ ಕೆಲಸವನ್ನಷ್ಟೇ ಅವರು ಮಾಡಿದರು. ಸೇನಾಧಿಪತಿಗಳು ಸೇನಾಧಿಪತ್ಯವನ್ನು ವಹಿಸಿ ಮುಂಚೂಣಿಗೆ ಬಂದು ಹೋರಾಡದಿದ್ದರೆ ಸೈನಿಕರು ಎಂದೂ ಸ್ಫೂರ್ತಿಯಿಂದ ಹೋರಾಡುವುದಿಲ್ಲ. ತ್ಯಾಗ ಮಾಡದೆ ರಾಜಸತ್ತೆಯನ್ನು ಉಳಿಸಿಕೊಳ್ಳ ಬೇಕೆನ್ನುವವರಿಂದಲೇ ಸಿಪಾಯಿ ಬಂಡಾಯ ಹೇಗೆ ಸೋಲು ಕಂಡಿತು ಎಂಬುದನ್ನು ವಿವೇಕಾನಂದರಿಗೆ ಜನರಲ್ ಸ್ಟ್ರಾಂಗ್ ವಿವರಿಸುತ್ತಾರೆ.

ಜನರಲ್ ಸ್ಟ್ರಾಂಗ್‌ಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬಗ್ಗೆ ಅಪಾರ ಗೌರವ ವಿತ್ತು. ‘‘ಸಿಪಾಯಿ ಬಂಡಾಯದಲ್ಲಿ ಆಕೆ ತನ್ನ ಸೈನ್ಯಕ್ಕೆ ನಾಯಕಿಯಾಗಿದ್ದಳು. ಆಕೆಯ ಹಾಗೆ ನಾಯಕತ್ವ ವಹಿಸಬೇಕಿದ್ದ ಅನೇಕರು ಸನ್ಯಾಸಿ ವೇಷ ಧರಿಸಿ ಜೀವಗಳ್ಳರಾಗಿದ್ದರು’’ ಎಂದು ಜನರಲ್ ಸ್ಟ್ರಾಂಗ್ ಹೇಳಿದ್ದಾರೆ.
ರೈತರು, ಚಪ್ಪಲಿ ಹೊಲಿಯುವವರು, ಕಸಗುಡಿಸುವವರು ಮುಂತಾದ ಕೆಳವರ್ಗದವರು ಮೇಲ್ವರ್ಗದವರಿಗಿಂತ ಹೆಚ್ಚಿನ ಕಾರ್ಯಶಕ್ತಿ ಹೊಂದಿದವರಾಗಿದ್ದು ಸ್ವಾವಲಂಬಿಗಳಾಗಿದ್ದಾರೆ. ಅವರು ಶತಮಾನಗಳಿಂದ ಮೌನವಾಗಿ ದುಡಿಯುತ್ತಲೇ ಮುಂದುವರಿದಿದ್ದಾರೆ. ಯಾವುದೇ ಗೊಣಗಾಟವಿಲ್ಲದೆ ದೇಶದ ಇಡೀ ಸಂಪತ್ತನ್ನು ಉತ್ಪಾದಿಸುವವರು ಅವರೇ ಆಗಿದ್ದಾರೆ. ಈ ಕೆಳವರ್ಗದವರು ಬಹಳ ಬೇಗನೆ ಮೇಲೇಳುವರು ಎಂದು ವಿವೇಕಾನಂದರು ಭವಿಷ್ಯ ನುಡಿದಿ ದ್ದಾರೆ. ಅವರು ಈ ಮಾತನ್ನು ಹೇಳು ವಾಗ ಫ್ರಾನ್ಸ್ ನಲ್ಲಿ ಪ್ಯಾರಿಸ್ ಕಮ್ಯೂನ್ ಎಂಬ ದುಡಿಯುವವರ್ಗದ ಕ್ರಾಂತಿಯಾಗಿದ್ದರೂ ಬಹಳ ಕಾಲದವರೆಗೆ ವಿಜಯದ ಫಲವನ್ನು ಆ ಬಡವರು ಪಡೆಯಲಿಕ್ಕಾಗಲಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ದುಡಿಯುವ ವರ್ಗ ವಿಜಯಸಾಧಿಸಿದ ದಾಖಲೆಗಳು ಇರಲಿಲ್ಲ. ಆದರೆ 20ನೇ ಶತಮಾನದಲ್ಲಿ ರಶ್ಯಾ, ಚೀನಾ ಸೇರಿದಂತೆ ಅನೇಕ ಕಡೆಗಳಲ್ಲಿ ಕ್ರಾಂತಿಗಳಾಗಿ ದುಡಿಯುವ ವರ್ಗ ವಿಜಯ ಸಾಧಿಸಿತು. ಹೀಗೆ ಅವರ ತರ್ಕಬದ್ಧ ಚಿಂತನೆಗಳಿಗೆ ಎಂದೂ ಸೋಲುಂಟಾಗಿಲ್ಲ.

‘‘ಬಡವರು ದೇಶದ ಬೆನ್ನೆಲುಬಾಗಿದ್ದಾರೆ. ಬಡವರ್ಗದವರು ಕೆಲಸ ನಿಲ್ಲಿಸಿದರೆ ನಿಮಗೆ ಅನ್ನ ಬಟ್ಟೆ ಎಲ್ಲಿಂದ ಸಿಗುತ್ತದೆೆ’’? ಎಂದು ವಿವೇಕಾನಂದರು ಶ್ರೀಮಂತರಿಗೆ ಪ್ರಶ್ನಿಸುತ್ತಾರೆ. ‘‘ಕೋಲ್ಕತಾದ ಕಸಗುಡಿಸುವವರು ಒಂದುದಿನ ಕೆಲಸ ನಿಲ್ಲಿಸಿದರೆ ನೀವು ಉದ್ವೇಗಕ್ಕೊಳಗಾಗುವಿರಿ. ಅವರು ಮೂರು ದಿನಗಳವರೆಗೆ ಕೆಲಸ ನಿಲ್ಲಿಸಿದರೆ ಸಾಂಕ್ರಾಮಿಕ ರೋಗ ಹರಡುವುದರಿಂದ ನೀವೆಲ್ಲ ಕೋಲ್ಕತಾ ಬಿಟ್ಟು ಹೋಗಬೇಕಾಗುವುದು. ಆದರೂ ನೀವು ಅವರನ್ನು ಕೆಳವರ್ಗದವರೆಂದು ಪರಿಗಣಿಸುವಿರಿ. ನಿಮ್ಮ ಸಂಸ್ಕೃತಿಯ ಬಗ್ಗೆ ಕೊಚ್ಚಿಕೊಳ್ಳುವಿರಿ’’ ಎಂದು ವಿವೇಕಾನಂದರು ಮೇಲ್ವರ್ಗದವರನ್ನು ಛೇಡಿಸಿದ್ದಾರೆ. ‘‘ಮೇಲ್ವರ್ಗದವರೇ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸತ್ತಿದ್ದೀರಿ. ನಿಮ್ಮ ಜಾಗದಲ್ಲಿ ನವಭಾರತದ ನಿರ್ಮಾಣವಾಗಬೇಕಿದೆ. ನೇಗಿಲನ್ನು ಉತ್ಸಾಹದಿಂದ ಹಿಡಿಯುವ ರೈತರ ಗುಡಿಸಲುಗಳಿಂದ, ಮೀನುಗಾರರ, ಚಪ್ಪಲಿ ಹೊಲಿಯುವವರ ಮತ್ತು ಕಸಗುಡಿಸುವವರ ಜೋಪಡಿಗಳಿಂದ, ಭಾರತ ಮೇಲೇಳಬೇಕಿದೆ. ಕಿರಾಣಿ ಅಂಗಡಿ ಗಳಿಂದ (ಎಫ್.ಡಿ.ಐ ಮೂಲಕ ಬರುವ ಮಾಲ್‌ಗಳಿಂದ ಅಲ್ಲ), ಆಹಾರ ಪದಾರ್ಥ ಬೇಯಿಸುವವರ ಒಲೆಗಳಿಂದ ನವಭಾರತ ಪುಟಿದೇಳಬೇಕಿದೆ. ಕಾರ್ಖಾನೆಗಳಿಂದ, ಅಂಗಡಿಗಳಿಂದ ಮತ್ತು ಮಾರುಕಟ್ಟೆಗಳಿಂದ ಹೊರಹೊಮ್ಮಬೇಕಿದೆ. ಕಾಡುಮೇಡುಗಳಿಂದ, ಬೆಟ್ಟಗುಡ್ಡ ಪರ್ವತಶ್ರೇಣಿಗಳಿಂದ ನವಭಾರತ ರೂಪುಗೊಳ್ಳಬೇಕಿದೆ’’ ಎಂದಿದ್ದಾರೆ.
‘‘ಜನಸಾಮಾನ್ಯರು ಸಹಸ್ರಾರು ವರ್ಷಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೆ ದಬ್ಬಾಳಿಕೆಯನ್ನು ಸಹಿಸಿಕೊಂಡಿದ್ದಾರೆ. ಹಾಗೆ ಸಹಿಸಿಕೊಳ್ಳುವುದರ ಮೂಲಕ ಅವರು ಧೈರ್ಯಶಾಲಿಗಳಾಗಿದ್ದಾರೆ. ಎದೆಗುಂದದ ಜೀವನಶಕ್ತಿಯನ್ನು ಹೊಂದಿದ್ದಾರೆ. ಬೊಗಸೆಯಷ್ಟು ಆಹಾರಧಾನ್ಯದಿಂದ ಬದುಕುವ ಅವರು ಜಗತ್ತನ್ನು ಹಿಡಿದಿಟ್ಟು ಕೊಳ್ಳಬಲ್ಲರು. ಪವಿತ್ರ ಮತ್ತು ನೈತಿಕ ಬದುಕಿನಿಂದಾಗಿ ಅವರು ಅದ್ಭುತ ಶಕ್ತಿಯನ್ನು ಹೊಂದಿದ್ದಾರೆ. ಅಂತಹ ಶಕ್ತಿ ಜಗತ್ತಿನ ಬೇರೆಲ್ಲೂ ಕಾಣುವುದಿಲ್ಲ’’ ಎಂದು ವಿವೇಕಾನಂದರು ದುಡಿಯುವ ವರ್ಗದ ಗುಣಗಾನ ಮಾಡಿದ್ದಾರೆ. ಹೀಗೆ ದುಡಿಯುವ ವರ್ಗದ ಜನರಲ್ಲಿ, ದಲಿತರಲ್ಲಿ, ಹಿಂದುಳಿದವರಲ್ಲಿ ಮತ್ತು ಒಟ್ಟಾರೆ ದುಡಿಯುವ ವರ್ಗದ ಜನರಲ್ಲಿ ಹಾಗೂ ಎಲ್ಲ ಧರ್ಮಗಳಲ್ಲಿನ ಮಾನವತಾವಾದಿಗಳಲ್ಲಿ ಉತ್ಸಾಹ ತುಂಬಿದ್ದಾರೆ. ವಿವೇಕಾನಂದರು ಗುರುತಿಸಿದ ಇಂಥ ಜನರೇ ನವಭಾರತದ ನಿರ್ಮಾಣ ಮಾಡಬಲ್ಲರು.

ವಿವೇಕಾನಂದರ ಬದುಕಿನ ಪ್ರಮುಖ ಘಟನೆಗಳು
♦ 1863 ಜನವರಿ 12: ಕೋಲ್ಕತಾದಲ್ಲಿ ಜನನ. (ತಂದೆ: ವಿಶ್ವನಾಥದತ್ತ, ತಾಯಿ: ಭುವನೇಶ್ವರ�

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ