ಕಠಿಣ ನಿಲುವಿನ ಹೊರತಾಗಿಯೂ ಭಾರತ ನಮ್ಮೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಬಯಸುತ್ತಿದೆ: ಟ್ರಂಪ್

Update: 2018-09-11 07:22 GMT

ವಾಶಿಂಗ್ಟನ್, ಸೆ.11: "ಅಮೆರಿಕ ಸರಕಾರ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಬಗ್ಗೆ ಕಠಿಣ ನಿಲುವು ತಾಳಿದ್ದರೂ ಆ ದೇಶ ನಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸಿದೆ. ಒಪ್ಪಂದ ಮಾಡಿಕೊಳ್ಳಲು ನಮ್ಮೊಂದಿಗೆ ದೂರವಾಣಿ ಕರೆ ಮಾಡಿದೆ'' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಇತರ ರಾಷ್ಟ್ರಗಳಿಗಿಂತ ಮತ್ತಷ್ಟು ವೇಗವಾಗಿ ಅಭಿವೃದ್ದಿ ಸಾಧಿಸಲು ಆರ್ಥಿಕವಾಗಿ ಬೆಳೆಯುತ್ತಿರುವ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳಿಗೆ ಈ ತನಕ ನೀಡುತ್ತಿದ್ದ ಸಬ್ಸಿಡಿಗಳನ್ನು ರದ್ದುಪಡಿಸಲು ಟ್ರಂಪ್ ಸರಕಾರ ಬಯಸಿದೆ. ಅಮೆರಿಕದ ಉತ್ಪನ್ನಗಳಿಗೆ ಭಾರತ ಶೇ.100ರಷ್ಟು ಸುಂಕ ವಿಧಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

‘‘ಭಾರತ ಇತ್ತೀಚೆಗೆ ನಮಗೆ ದೂರವಾಣಿ ಕರೆ ಮಾಡಿದೆ. ಇದೇ ಮೊದಲ ಬಾರಿ ನಮ್ಮೊಂದಿಗೆ ವ್ಯಾಪಾರ ಒಪ್ಪಂದವನ್ನು ಆರಂಭಿಸುವುದಾಗಿ ಹೇಳಿದೆ’’ ಎಂದು ಟ್ರಂಪ್ ಬಹಿರಂಗಪಡಿಸಿದರು. ಆದರೆ, ಅವರಿಗೆ ದೂರವಾಣಿ ಕರೆ ಮಾಡಿದವರು ಯಾರೆಂದು ಅಮೆರಿಕ ಅಧ್ಯಕ್ಷರು ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News