ಐದನೇ ಟೆಸ್ಟ್‌ನಲ್ಲೂ ಭಾರತಕ್ಕೆ ಸೋಲು

Update: 2018-09-11 16:40 GMT

 ಲಂಡನ್, ಸೆ.11: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 118 ರನ್‌ಗಳ ಸೋಲು ಅನುಭವಿಸಿದ್ದು, 5 ಟೆಸ್ಟ್‌ಗಳ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡಿದೆ.

 ಟೆಸ್ಟ್‌ನ ಅಂತಿಮ ದಿನವಾಗಿರುವ ಮಂಗಳವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 464 ರನ್ ಗಳಿಸಬೇಕಿದ್ದ ಟೀಮ್ ಇಂಡಿಯಾ 94.3 ಓವರ್‌ಗಳಲ್ಲಿ 345 ರನ್‌ಗಳಿಗೆ ಆಲೌಟಾಗಿದೆ.

ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 149 ರನ್(224ಎ, 20ಬೌ,1ಸಿ) ಮತ್ತು ರಿಷಭ್ ಪಂತ್ 114ರನ್(146ಎ, 15ಬೌ,4ಸಿ) ಗಳಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News