ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ ಎಸ್ ಪಿ ತ್ಯಾಗಿಗೆ ಷರತ್ತು ಬದ್ಧ ಜಾಮೀನು

Update: 2018-09-12 07:01 GMT

ಹೊಸದಿಲ್ಲಿ, ಸೆ.12:   ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಪ್ರಮುಖ ಆರೋಪಿ ಭಾರತೀಯ ವಾಯು ಸೇನೆ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ಬುಧವಾರ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಎಸ್ ಪಿ ತ್ಯಾಗಿ ಪರ  ಸಲ್ಲಿಸಲಾಗಿದ್ದ  ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪಟಿಯಾಲ ಕೋರ್ಟ್ ನ ವಿಶೇಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು   ಎಸ್ ಪಿ ತ್ಯಾಗಿ ಮತ್ತು ಅವರ  ಸಂಬಂಧಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದರು.

 ಎಲ್ಲ ಆರೋಪಿಗಳಿಗೂ ತಲಾ ಒಂದು ಲಕ್ಷ ರೂ. ಭದ್ರತಾ ಶೂರಿಟಿ ಮೇಲೆ  ಜಾಮೀನು ನೀಡಲಾಗಿದ್ದು ಮುಂದಿನ ವಿಚಾರಣೆಗಳಿಗೆ ಅಗತ್ಯಬಿದ್ದರೆ ಕಡ್ಡಾಯವಾಗಿ  ಹಾಜರಾಗುವಂತೆ  ನ್ಯಾಯಾಧೀಶರು ಸೂಚಿಸಿದ್ದಾರೆ

 ಪ್ರಕರಣದ ಆರೋಪಿಗಳಾದ ಎಸ್ ಪಿ ತ್ಯಾಗಿ, ಮಧ್ಯವರ್ತಿಗಳಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಮತ್ತು ಫಿನ್ ಮೆಕ್ಕಾನಿಕಾ ಸಂಸ್ಥೆಯ ನಿರ್ದೇಶಕ ಗಿಸೆಪ್ಪೆ ಓರ್ಸಿ ಮತ್ತು ಬ್ರುನೋ ಸ್ಪಾಂಗ್ನೋಲಿನಿ ಅವರಿಗೆ ನ್ಯಾಯಾಲಯ ಜುಲೈ 24 ರಂದು ಸಮನ್ಸ್ ಜಾರಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News