ಮೊಬೈಲ್ ಫೋನ್ ವಿಕಿರಣ ಬಗ್ಗೆ ಅರ್ಜಿ : ನಿಮ್ಮ ಮೊಬೈಲ್ ಫೋನ್ ಮೊದಲು ನ್ಯಾಯಾಲಯಕ್ಕೆ ಒಪ್ಪಿಸಿ ಎಂದ ಹೈಕೋರ್ಟ್

Update: 2018-09-13 12:44 GMT

ಭೋಪಾಲ್, ಸೆ. 13: ಮೊಬೈಲ್ ಫೋನುಗಳು ಹೊರಸೂಸುವ ಅಪಾಯಕಾರಿ ವಿಕಿರಣದತ್ತ  ನ್ಯಾಯಾಲಯದ ಗಮನ ಸೆಳೆಯುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದವರಿಗೆ ಮಧ್ಯ ಪ್ರದೇಶ ಹೈಕೋರ್ಟ್ ಕುತೂಹುಲಕಾರಿ ನಿರ್ದೇಶನ ನೀಡಿ ಅವರ ಮೊಬೈಲ್ ಫೋನುಗಳನ್ನು ತನ್ನ ವಶಕ್ಕೆ ನೀಡುವಂತೆ ಹೇಳಿದೆ.

ಈ ಅರ್ಜಿಯನ್ನು ತಿರಸ್ಕರಿಸುವ ಬದಲು ಮುಖ್ಯ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲ ಅವರನ್ನೊಳಗೊಂಡ ನ್ಯಾಯಪೀಠ  ತನ್ನ ಆದೇಶದಲ್ಲಿ  ಅರ್ಜಿದಾರರು ಈ ವಿಚಾರದಲ್ಲಿ ನ್ಯಾಯಾಲಯದಿಂದ ಸೂಕ್ತ ಆದೇಶ ನಿರೀಕ್ಷಿಸುವ ಮೊದಲು ತಮ್ಮನ್ನು ಅಪಾಯಕಾರಿ ವಿಕಿರಣದಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ಮೊಬೈಲ್ ಫೋನುಗಳನ್ನು ನಮಗೆ ಒಪ್ಪಿಸಲು ಸಿದ್ಧರಿದ್ದಾರೆಯೇ  ಎಂದು ಪ್ರಶ್ನಿಸಿತು.

ರಾಜೇಂದ್ರ ದಿವಾನ್ ಸಹಿತ ಇತರ ಅರ್ಜಿದಾರರು ಇದೀಗ ತಮ್ಮ ಮೊಬೈಲ್ ಫೋನುಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 14ರಂದು ನಡೆಯಲಿರುವುದರಿಂದ ಅದಕ್ಕಿಂತ ಮುಂಚೆ ಅವರು ತೀರ್ಮಾನ ಕೈಗೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News