ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಶೀಘ್ರ ಬಿಡುಗಡೆಗೆ ಉ.ಪ್ರದೇಶ ಸರಕಾರದ ಆದೇಶ
Update: 2018-09-13 20:18 IST
ಲಕ್ನೋ, ಸೆ.13: ಕಳೆದ ವರ್ಷದ ನವೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಯಾನೆ ರಾವಣ್ ರನ್ನು ಉತ್ತರ ಪ್ರದೇಶ ಸರಕಾರ ಶೀಘ್ರ ಬಿಡುಗಡೆಗೊಳಿಸಲಿದೆ. ಶಹರಾನ್ಪುರ ಜಾತಿ ಕಲಹದ ಸಂದರ್ಭ ಅವರನ್ನು ಬಂಧಿಸಲಾಗಿತ್ತು.
ಶಹರಾನ್ಪುರದಲ್ಲಿ 2017ರ ಮೇ 9ರಂದು ಪೊಲೀಸರು ಮತ್ತು ಭೀಮ್ ಆರ್ಮಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ನಂತರ ಚಂದ್ರಶೇಖರ್ ಸುದ್ದಿಯಾಗಿದ್ದರು.