ಉಷ್ಣತೆ ಹೆಚ್ಚಿದರೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ: ವಿಜ್ಞಾನಿಗಳು

Update: 2018-09-14 16:37 GMT

ಟೆಪಿಕ್ (ಮೆಕ್ಸಿಕೊ), ಸೆ. 14: ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಉದ್ದೇಶದ ಜಾಗತಿಕ ಕ್ರಮಗಳನ್ನು ಪಾಲಿಸುವಲ್ಲಿನ ವೈಫಲ್ಯದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಉಷ್ಣತೆ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಸಂಶೋಧಕರು ಗುರುವಾರ ಹೇಳಿದ್ದಾರೆ.

 ಕೈಗಾರಿಕಾ ಪೂರ್ವ ಕಾಲದಲ್ಲಿದ್ದ ಜಾಗತಿಕ ಉಷ್ಣತೆಗಿಂತ 2 ಡಿಗ್ರಿ ಸೆಲ್ಸಿಯಸ್‌ವರೆಗಿನ ಹೆಚ್ಚಿನ ಉಷ್ಣತೆಯನ್ನು ಕಾಯ್ದುಕೊಳ್ಳಲು ಪ್ಯಾರಿಸ್ ಹವಾಮಾನ ಒಪ್ಪಂದ ಕರೆ ನೀಡುತ್ತದೆ. ಕೈಗಾರಿಕಾ ಪೂರ್ವ ಕಾಲದ ಉಷ್ಣತೆಗಿಂತ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣತೆಗೆ ಜಾಗತಿಕ ಉಷ್ಣತೆಯನ್ನು ಮಿತಿಗೊಳಿಸುವುದು ಅತ್ಯುತ್ತಮ ಎಂದು ಅದು ಹೇಳಿದೆ.

ಉಷ್ಣತೆಯ ಮಟ್ಟವು 3 ಡಿಗ್ರಿ ಅಥವಾ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದರೆ ಸಾವಿನ ದರ 1 ರಿಂದ 9 ಶೇಕಡದಷ್ಟು ಹೆಚ್ಚುತ್ತದೆ ಎಂದು ‘ಕ್ಲೈಮ್ಯಾಟಿಕ್ ಚೇಂಜ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News