ಮೆಡಿಟರೇನಿಯನ್ ಸಮುದ್ರದಲ್ಲಿ 21 ವಲಸಿಗರ ಶವ ಪತ್ತೆ

Update: 2018-09-14 16:46 GMT
ಸಾಂದರ್ಭಿಕ ಚಿತ್ರ

ಜಿನೇವ, ಸೆ. 14: ಸ್ಪೇನ್ ತಲುಪಲು ಪ್ರಯತ್ನಿಸುತ್ತಿದ್ದ ವಲಸಿಗರದ್ದು ಎನ್ನಲಾದ 21 ಮಂದಿಯ ದೇಹಗಳು ಈ ತಿಂಗಳು ಮೆಡಿಟರೇನಿಯನ್ ಸಮುದ್ರದ ತೀರದಲ್ಲಿ ಪತ್ತೆಯಾಗಿವೆ ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಅಂತಾರಾಷ್ಟ್ರೀಯ ವಲಸೆ ಸಂಘಟನೆ (ಐಒಎಮ್) ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದರೊಂದಿಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಈ ವರ್ಷ ಸಂಭವಿಸಿದದ ವಲಸಿಗರ ಸಂಖ್ಯೆಯು 1,586ಕ್ಕೆ ಏರಿದೆ ಎಂದು ಅದು ಹೇಳಿದೆ.

ಒಂಬತ್ತು ಸಹಾರ ಆಫ್ರಿಕನ್ನರ ಮೃತದೇಹಗಳು ಅಲ್ಜೀರಿಯದ ಟ್ಲೆಮ್‌ಸನ್ ಪ್ರಾಂತದ ಮಾರ್ಸ ಬೆನ್ ಮಹೈದಿ ಸಮೀಪದ ಕಡಲ ಕಿನಾರೆಯಲ್ಲಿ ಸೆಪ್ಟಂಬರ್ 4ರಂದು ಪತ್ತೆಯಾಗಿದೆ. ನಂತರದ ದಿನಗಳಲ್ಲಿ ಇನ್ನೂ ಹಲವರ ದೇಹಗಳು ದಡ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News