ಬಿಜೆಪಿಯನ್ನು ಸೋಲಿಸಿದ ನಂತರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಿರ್ಧಾರ : ಮಮತಾ ಬ್ಯಾನರ್ಜಿ

Update: 2018-09-15 10:58 GMT

ಕೊಲ್ಕತ್ತಾ, ಸೆ. 15: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ವಿಪಕ್ಷ ತನ್ನ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಿರ್ಧರಿಸುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೊಲ್ಕತ್ತಾದಲ್ಲಿ ಸಮಾರಂಭವೊಂದನ್ನುದ್ದೇಶಿಸಿ ಮಾತನಾಡಿದ ಅವರು  ಪ್ರಧಾನಿ ಅಭ್ಯರ್ಥಿ ಮುಖ್ಯವಾಗಿದ್ದರೂ ಅದರ ಬಗ್ಗೆ ಬಿಜೆಪಿಯನ್ನು ಸೋಲಿಸಿದ ನಂತರವಷ್ಟೇ ಸಾಮೂಹಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬಿಜೆಪಿಯ ಒಡೆದು ಆಳುವ ರಾಜಕೀಯದ ಬಗ್ಗೆ ಮಹಾಮೈತ್ರಿಗೆ ಎಚ್ಚರಿಕೆ ನೀಡಿದ ಅವರು ವಿಪಕ್ಷಗಳ ಮೈತ್ರಿ ಮುರಿಯಲು ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ಸಫಲವಾಗದು ಎಂದಿದ್ದಾರೆ.

''ಅವರು ಅಡ್ವಾಣಿಜಿ ಮತ್ತು ಅಟಲ್ ಜಿ ನಡುವೆ ಒಡಕು ಮೂಡಿಸಲು ಯುತ್ನಿಸಿದ್ದರು. ಈಗ ಅವರು ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಮಧ್ಯೆ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ನಾವು ಬಿಜೆಪಿಗೆ 'ನೋ' ಹೇಳಬೇಕು ಇತರರಿಗೆ 'ಯೆಸ್' ಎನ್ನಬೇಕು'' ಎಂದರು ಮಮತಾ.

ಕಳೆದ ಚುನಾವಣೆ ಗೆದ್ದಂದಿನಿಂದ ಬಿಜೆಪಿ ದರ್ಪ ತೋರಿಸುತ್ತಿದೆ ಹಾಗೂ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದ ಮಮತಾ, 2019ರ ಚುನಾವಣೆ ಜನರ ಚುನಾವಣೆಯಾಗಲಿದೆ ಎಂದು ತಾವು ನಂಬಿದ್ದಾಗಿ ಹೇಳಿದರು. ಜನರಿಗೆ ಬಿಜೆಪಿಯ ದ್ವೇಷದ ರಾಜಕೀಯದ ಬಗ್ಗೆ ಅರಿವಾಗಿದೆ. ಪಕ್ಷ ಮುಂದಿನ ಚುಣಾವಣೆ ಯಲ್ಲಿ 200ರ ಗಡಿ ದಾಟದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News