ಅಮಿತ್ ಶಾ ಜಿನ್ನಾರನ್ನು ಹೋಲುತ್ತಾರೆ: ರಾಮಚಂದ್ರ ಗುಹಾ

Update: 2018-09-15 11:19 GMT

ಹೊಸದಿಲ್ಲಿ, ಸೆ.15: ಕೆಲವೊಂದು ವಿಧದಲ್ಲಿ ಪಾಕಿಸ್ತಾನದ ನಾಯಕ ಮುಹಮ್ಮದ್ ಅಲಿ ಜಿನ್ನಾರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಹೋಲಿಸಬಹುದು ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.

ತಮ್ಮ ಹೊಸ ಕೃತಿ ‘ಗಾಂಧಿ: ದಿ ಇಯರ್ಸ್ ದ್ಯಾಟ್ ಚೇಂಜ್ಡ್ ದಿ ವರ್ಲ್ಡ್, 1914-1948'' ಇದರಲ್ಲಿ ತಾನು ಜಿನ್ನಾರನ್ನು ವಿವರಿಸಿರುವ ರೀತಿ  ‘ಅನುಕಂಪ' ಆಧರಿತವಲ್ಲ ಎಂದು ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಾ ಗುಹಾ ಹೇಳಿದ್ದಾರೆ.

“ಏನೇ ಆಗಲಿ ನಾನು ಚುನಾವಣೆ ಗೆದ್ದೇ ಗೆಲ್ಲುತ್ತೇನೆ'' ಎಂದು ಅಮಿತ್ ಶಾ  ಹೇಳುತ್ತಾರೆ. ಅತ್ತ ಜಿನ್ನಾ ``ಏನೇ ಆಗಲಿ, ಹೆಣಗಳು ಬಿದ್ದರೂ ನಾನು ಪಾಕಿಸ್ತಾನವನ್ನು ಪಡೆಯುತ್ತೇನೆ'' ಎಂದು ಹೇಳಿದ್ದರು'' ಎಂದರು ಗುಹಾ.

ಮುಹಮ್ಮದ್ ಅಲಿ ಜಿನ್ನಾ ಒಬ್ಬ ನೇರ ನಡೆನುಡಿಯ ವ್ಯಕ್ತಿಯಾಗಿದ್ದರು ಎಂದು ಹೇಳಿದ ಅವರು, ಪಾಕಿಸ್ತಾನದ ಸ್ಥಾಪಕ ಚಾಣಾಕ್ಷ ರಾಜಕಾರಣಿಯಾಗಿದ್ದರು ಹಾಗೂ ಪಾಕಿಸ್ತಾನ ನಿರ್ಮಿಸುವ ಏಕೈಕ ಉದ್ದೇಶ ಅವರು ಹೊಂದಿದ್ದರು ಎಂದರು.

“1930ರ ನಂತರ ಜಿನ್ನಾರಿಗೆ ತಾವು ನಾಯಕರಾಗಿರುವ ಹೊಸ ದೇಶ ನಿರ್ಮಿಸುವ ಹೊಸ ಆಸೆ ಹುಟ್ಟಿಕೊಂಡಿತ್ತು'' ಎಂದೂ ಗುಹಾ ಹೇಳಿದರು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದಂದಿನಿಂದ ಅವರ ಹತ್ಯೆಯಾಗುವ ತನಕದ ಜೀವನ ವೃತ್ತಾಂತವನ್ನು ಗುಹಾ ಅವರ 1,100 ಪುಟಗಳ ಪುಸ್ತಕ ವಿವರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News