ಮಾಂಸಾಹಾರ ಸೇವನೆ ಯಾರ್ಯಾರು? ಎಷ್ಟೆಷ್ಟು?

Update: 2018-09-15 18:54 GMT

‘ಇಂಡಿಯಾ ಸ್ಪೆಂಡ್’ ನಡೆಸಿರುವ ರಾಷ್ಟ್ರೀಯ ಆರೋಗ್ಯ ದತ್ತಾಂಶಗಳ ಒಂದು ವಿಶ್ಲೇಷಣೆಯ ಪ್ರಕಾರ ಭಾರತೀಯರಲ್ಲಿ ಶೇ. 80 ಮಂದಿ ಪುರುಷರು ಮತ್ತು ಶೇ. 70 ಮಂದಿ ಮಹಿಳೆಯರು ಮೊಟ್ಟೆ, ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸವನ್ನು ವಾರಕ್ಕೊಮ್ಮೆ ಅಲ್ಲವಾದರೂ ಆಗೊಮ್ಮೆ ಈಗೊಮ್ಮೆ ತಿನ್ನುತ್ತಾರೆ. ಆದರೆ ಅವರ ದೈನಂದಿನ ಆಹಾರವು ಹಾಲು ಅಥವಾ ಮೊಸರು, ದ್ವಿದಳ ಧಾನ್ಯಗಳು ಅಥವಾ ಬೀನ್ಸ್ ಹಾಗೂ ಕಡು ಹಸಿರು ಮತ್ತು ಸೊಪ್ಪುತರಕಾರಿಗಳಿಂದ ಕೂಡಿದ ಸಸ್ಯಾಹಾರವಾಗಿರುತ್ತದೆ. ಒಟ್ಟಿನಲ್ಲಿ ಶೇ. 47.8 ಭಾರತೀಯ ಮಹಿಳೆಯರು, ಶೇ. 48.9 ಪುರುಷರು ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸವನ್ನು ವಾರಕ್ಕೊಮ್ಮೆ ತಿನ್ನುತ್ತಾರೆ ಎನ್ನುತ್ತದೆ 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ.

ಧರ್ಮ ಮತ್ತು ಸಿದ್ಧಾಂತದ ನೆಲೆಯಲ್ಲಿ ಬಿಜೆಪಿ ಸರಕಾರವು ಸಸ್ಯಾಹಾರವನ್ನು ಪ್ರತಿನಿಧಿಸುತ್ತಿದೆ. ಮಹಾತ್ಮಾ ಗಾಂಧಿಯವರ ಜನ್ಮದಿನ ಅಕ್ಟೋಬರ್ 2ರಂದು ದೇಶದ ಎಲ್ಲ ರೈಲುಗಳಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡುವ ಭಾರತೀಯ ರೈಲ್ವೆಯ ಒಂದು ಪ್ರಯತ್ನವು ಸರಕಾರದ ಈ ಪ್ರತಿಪಾದನೆಯ ಇತ್ತೀಚಿನ ಉದಾಹರಣೆಯಾಗಿದೆ. ಅದೇನೇ ಇದ್ದರೂ, ‘ಇಂಡಿಯಾ ಸ್ಪೆಂಡ್’ ನಡೆಸಿರುವ ರಾಷ್ಟ್ರೀಯ ಆರೋಗ್ಯ ದತ್ತಾಂಶಗಳ ಒಂದು ವಿಶ್ಲೇಷಣೆಯ ಪ್ರಕಾರ ಭಾರತೀಯರಲ್ಲಿ ಶೇ. 80 ಮಂದಿ ಪುರುಷರು ಮತ್ತು ಶೇ. 70 ಮಂದಿ ಮಹಿಳೆಯರು ಮೊಟ್ಟೆ, ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸವನ್ನು ವಾರಕ್ಕೊಮ್ಮೆ ಅಲ್ಲವಾದರೂ ಆಗೊಮ್ಮೆ ಈಗೊಮ್ಮೆ ತಿನ್ನುತ್ತಾರೆ. ಆದರೆ ಅವರ ದೈನಂದಿನ ಆಹಾರವು ಹಾಲು ಅಥವಾ ಮೊಸರು, ದ್ವಿದಳ ಧಾನ್ಯಗಳು ಅಥವಾ ಬೀನ್ಸ್ ಹಾಗೂ ಕಡು ಹಸಿರು ಮತ್ತು ಸೊಪ್ಪುತರಕಾರಿಗಳಿಂದ ಕೂಡಿದ ಸಸ್ಯಾಹಾರವಾಗಿರುತ್ತದೆ. ಒಟ್ಟಿನಲ್ಲಿ ಶೇ. 47.8 ಭಾರತೀಯ ಮಹಿಳೆಯರು, ಶೇ. 48.9 ಪುರುಷರು ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸವನ್ನು ವಾರಕ್ಕೊಮ್ಮೆ ತಿನ್ನುತ್ತಾರೆ ಎನ್ನುತ್ತದೆ 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ.

ಮೊಟ್ಟೆ ಮತ್ತು ಮಾಂಸದಂತಹ ಮಾಂಸಾಹಾರಿ ಆಹಾರವನ್ನು ಜಂಕ್‌ಫುಡ್‌ಗಳೊಂದಿಗೆ ಸಮೀಕರಿಸುವ ಚಿತ್ರವೊಂದನ್ನು ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಟ್ವೀಟ್ ಮಾಡಿದಾಗ, ಎರಡೂ ರೀತಿಯ ಆಹಾರಗಳು ಬೊಜ್ಜು ಉಂಟು ಮಾಡುತ್ತದೆ ಎಂಬ ಅರ್ಥ ಮೂಡಿದಾಗ, ಅದು ವಿವಾದಾಸ್ಪದವಾಯಿತು. ತರುವಾಯ ಆ ಚಿತ್ರವನ್ನು ತೆಗೆಯಲಾಯಿತು.

2015ರಲ್ಲಿ ಮಧ್ಯಪ್ರದೇಶ ಸರಕಾರವು ಅಂಗನವಾಡಿಗಳಲ್ಲಿ ನೀಡುವ ಊಟಗಳಲ್ಲಿ ಮೊಟ್ಟೆಗಳನ್ನು ನಿಷೇಧಿಸಿತ್ತು. ಇದಕ್ಕೆ ಜೈನ ಸಮುದಾಯದಿಂದ ಬಂದ ಒತ್ತಡ ಕಾರಣವೆಂದು ಹೇಳಲಾಗಿತ್ತು. ಹೈದರಾಬಾದ್‌ನ ರಾಷ್ಟ್ರೀಯ ಪೌಷ್ಟಿಕ ಆಹಾರ ಸಂಸ್ಥೆಯು ಹಾಲು, ಮಾಂಸ, ಮೀನು ಮತ್ತು ಮೊಟ್ಟೆ ಹಾಗೂ ಬೇಳೆ ಕಾಳುಗಳ ಪ್ರೊಟೀನ್ ಭರಿತ ಆಹಾರ ಸೇವಿಸಬೇಕೆಂದು ಶಿಫಾರಸುಗಳನ್ನು ಮಾಡಿದ ಮೇಲೂ ಸರಕಾರಗಳು ಇಂತಹ ಹೆಜ್ಜೆಗಳನ್ನಿಡುತ್ತಿದೆ.

ಇದೀಗ ಓರ್ವ ಸಸ್ಯಾಹಾರಿಯಾಗಿದ್ದ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ‘ಸಸ್ಯಾಹಾರ ದಿನ’ವನ್ನಾಗಿ ಆಚರಿಸಲು ಭಾರತೀಯ ರೈಲ್ವೆ ಯೋಚಿಸುತ್ತಿದೆ. ಅಂದು ತನ್ನ ಪರಿಸರದಲ್ಲಿ ಅದು ಸಸ್ಯಾಹಾರವನ್ನು ಮಾತ್ರ ವಿತರಿಸಿ, ಆ ದಿನ ಮಾಂಸವನ್ನು ಸೇವಿಸದಂತೆ ತನ್ನ ಇಲಾಖೆಯ ಎಲ್ಲಾ ನೌಕರರನ್ನು ವಿನಂತಿಸಲಿದೆ.

ವಾಯುಮಾಲಿನ್ಯ ಮತ್ತು ಪೌಷ್ಟಿಕ ಆಹಾರದ ಕೊರತೆಯ ಬಳಿಕ, ಆಹಾರ ಸಂಬಂಧಿ ಅಪಾಯವೇ ಭಾರತದಲ್ಲಿ ಸಾವು ಮತ್ತು ಅಸಾಮರ್ಥ್ಯಕ್ಕೆ ಅತ್ಯಂತ ದೊಡ್ಡ ‘ರಿಸ್ಕ್ ಫ್ಯಾಕ್ಟರ್’ ಎಂದು 2017ರ ನವೆಂಬರ್‌ನಲ್ಲಿ ಇಂಡಿಯಾ ಸ್ಪೆಂಡ್ ವರದಿ ಮಾಡಿದೆ.

ಮಹಿಳೆಯರಲ್ಲಿ ಶೇ. 37.4 ಮಂದಿ ವಾರಕ್ಕೊಮ್ಮೆ ಮೊಟ್ಟೆ, ಶೇ. 36 ಮಂದಿ ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸ ಸೇವಿಸುತ್ತಾರೆ. ಭಾರತದಲ್ಲಿ ಸ್ತ್ರೀಯರಿಗಿಂತ ಹೆಚ್ಚು ಮಂದಿ ಪುರುಷರು ಮಾಂಸಾಹಾರ ಸೇವಿಸುತ್ತಾರೆ. ಹತ್ತು ಮಂದಿ ಸ್ತ್ರೀಯರಲ್ಲಿ ಸುಮಾರು ಮೂವರು (ಶೇ. 29.3) ಮೊಟ್ಟೆ, ಕೋಳಿ ಮಾಂಸ, ಮೀನು ಅಥವಾ ಇತರ ಮಾಂಸ ಸೇವಿಸುವುದಿಲ್ಲ. ಪುರುಷರಲ್ಲಿ ಹತ್ತರಲ್ಲಿ ಇಬ್ಬರು ಇದೇ ಆಹಾರವನ್ನು ಸೇವಿಸುವುದಿಲ್ಲ.

ವಯಸ್ಸು, ವೈವಾಹಿಕ ಸ್ಥಾನಮಾನ, ಭೂಗೋಳ, ಸಂಪತ್ತು ಮತ್ತು ಜಾತಿ ಮಾಂಸಾಹಾರವನ್ನು ನಿರ್ಧರಿಸುವ ಅಂಶಗಳಾಗಿವೆ.

ಎಲ್ಲ ವರ್ಗಗಳಲ್ಲಿ ಆಹಾರದ ಸಾಪ್ತಾಹಿಕ ಉಪಭೋಗ ಒಂದೇ ತೆರನಾಗಿಲ್ಲ. ಹತ್ತೊಂಬತ್ತು ವರ್ಷಕ್ಕಿಂತ ಮೇಲಿನ ವಯೋಮಾನದವರು ಪ್ರತೀ ವಾರ ಹೆಚ್ಚು ಮೊಟ್ಟೆಗಳನ್ನು ಮತ್ತು ಯಾವುದೇ ರೀತಿಯ ಮಾಂಸವನ್ನು ತಿನ್ನುತ್ತಾರೆ. ಪುರುಷರಲ್ಲಿ ವಿವಾಹವಾಗದೆ ಉಳಿಯುವವರು ಅತ್ಯಂತ ಹೆಚ್ಚು ಮೊಟ್ಟೆ ಹಾಗೂ ಮಾಂಸ ಸೇವಿಸುವವರು. ಹಾಗೆಯೇ ನಗರಗಳಲ್ಲಿ ವಾಸಿಸುವ ಪುರುಷರು ಹಳ್ಳಿಗಳಲ್ಲಿ ವಾಸಿಸುವ ಪುರುಷರಿಗಿಂತ ಹೆಚ್ಚು ಮಾಂಸ ಸೇವಿಸುತ್ತಾರೆ. ಸ್ತ್ರೀಯರಲ್ಲಿ ವಿಧವೆಯರು, ವಿವಾಹ ವಿಚ್ಛೇದಿತರು ಅಥವಾ ಪತಿಯಿಂದ ಪರಿತ್ಯಕ್ತರಾದವರು ಗರಿಷ್ಠ ಮೊಟ್ಟೆ ಹಾಗೂ ಮಾಂಸ ಸೇವಿಸುವವರು. (ಶೇ. 41.5 ಮೊಟ್ಟೆ ಮತ್ತು 47.4 ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸ)

ಸಸ್ಯಾಹಾರ ಅಥವಾ ಮಾಂಸಾಹಾರ ಆಯ್ಕೆಯಲ್ಲಿ ವ್ಯಕ್ತಿಯ ಶಿಕ್ಷಣವು ಪಾತ್ರ ವಹಿಸುತ್ತದೆ ಎನ್ನಬಹುದಾಗಿದೆ. ಐದು ವರ್ಷಗಳ ಕಾಲ ಶಿಕ್ಷಣ ಪಡೆದವರು ಗರಿಷ್ಠ ಪ್ರಮಾಣದಲ್ಲಿ ಮೊಟ್ಟೆ ಹಾಗೂ ಮಾಂಸ ಸೇವಿಸುತ್ತಾರೆ. ಪುರುಷರಲ್ಲಿ ಶೇ. 54.2 ಮತ್ತು ಶೇ. 57.6 ಮತ್ತು ಮಹಿಳೆಯರಲ್ಲಿ ಶೇ. 48.2 ಮತ್ತು 51.8

ಧರ್ಮಗಳನ್ನು ಪರಿಗಣಿಸಿ ಹೇಳುವುದಾದರೆ ಕ್ರಿಶ್ಚಿಯನ್ನರು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಮೊಟ್ಟೆ ಮತ್ತು ಮಾಂಸ ಸೇವಿಸುತ್ತಾರೆ. ಪುರುಷರಲ್ಲಿ ಶೇ. 71.5 ಮತ್ತು ಶೇ. 75.6 ಮತ್ತು ಮಹಿಳೆಯರಲ್ಲಿ ಶೇ.64.7 ಮತ್ತು ಶೇ. 67.3

ಗರಿಷ್ಠ ಪ್ರಮಾಣದಲ್ಲಿ ಮೊಟ್ಟೆ, ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸ ಸೇವಿಸುವವರು ತಮ್ಮ ಜಾತಿ ಯಾವುದೆಂದು ತಮಗೆ ಗೊತ್ತಿಲ್ಲ ಎಂದು ಹೇಳಿದವರು ಎಂಬುದು ಸಮೀಕ್ಷೆಯಿಂದ ತಿಳಿದು ಬಂದ ವಿಚಾರ ಇನ್ನೊಂದು ಕುತೂಹಲಕಾರಿ ಸಂಗತಿ. ಪುರುಷರಲ್ಲಿ 49.2 ಮತ್ತು 51.6. ಮೊಟ್ಟೆಗಳ ಸೇವನೆಯು ಮಹಿಳೆಯರ ವಿಷಯದಲ್ಲೂ ಇದು ನಿಜ. ಮೀನು, ಕೋಳಿ ಮಾಂಸ ಮತ್ತು ಇತರ ಮಾಂಸ ಸೇವನೆಯು ‘ಇತರ’ ಜಾತಿಗಳಲ್ಲಿ ಗರಿಷ್ಠ ಪ್ರಮಾಣದಲ್ಲಿದೆ.

ಕುಟುಂಬದ ಆದಾಯ ಏರಿಕೆಯಾದಾಗ ಮೊಟ್ಟೆ ಮತ್ತು ಮಾಂಸ ಸೇವನೆಯ ಪ್ರಮಾಣವು ಹೆಚ್ಚುತ್ತದೆ. ಆದರೆ ಅತ್ಯಂತ ಶ್ರೀಮಂತರಾದ ಶೇ. 20 ಭಾರತೀಯರಲ್ಲಿ ಮೊಟ್ಟೆ ಮತ್ತು ಮಾಂಸ ಸೇವಿಸುವವರ ಪ್ರತಿಶತ ಕಡಿಮೆ ಇದೆ. ಮಾಂಸ ತಿನ್ನುವವರಲ್ಲಿ ಗರಿಷ್ಠ ಸಂಖ್ಯೆಯ ಮಂದಿ ಕೇರಳದಲ್ಲಿ, ಅತ್ಯಂತ ಕಡಿಮೆ ಸಂಖ್ಯೆಯ ಮಂದಿ ಪಂಜಾಬ್‌ನಲ್ಲಿ.

ಸ್ತ್ರೀಯರಿಗೆ ಸಂಬಂಧಿಸಿದ ದತ್ತಾಂಶಗಳ ಪ್ರಕಾರ ಕೇರಳ (ಶೇ. 93.8), ಗೋವಾ (ಶೇ. 85.7) ಮತ್ತು ಅಸ್ಸಾಂ (ಶೇ. 80.4)ನಲ್ಲಿ ಮೀನು, ಕೋಳಿ ಮಾಂಸ ಅಥವಾ ಇತರ ಮಾಂಸ ತಿನ್ನುವವರು ಅತ್ಯಧಿಕ ಸಂಖ್ಯೆಯಲ್ಲಿದ್ದರೆ, ಪಂಜಾಬ್‌ನಲ್ಲಿ (ಶೇ.4) ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿಯಾಗಿ ಪುರುಷರಲ್ಲಿ ಇದೇ ಆಹಾರವನ್ನು ಸೇವಿಸುವವರ ಪ್ರಮಾಣ ಪ್ರತಿಶತ ತ್ರಿಪುರಾದಲ್ಲಿ 94.8, ಕೇರಳದಲ್ಲಿ 90.1, ಗೋವಾದಲ್ಲಿ 88 ಇದೆ.

ಕೃಪೆ: thequint.com

Writer - ಸ್ವಗತ ಯಾದವರ್

contributor

Editor - ಸ್ವಗತ ಯಾದವರ್

contributor

Similar News