ಚೆಕ್ ಗಳನ್ನು ಕಳುಹಿಸಬೇಡಿ, ನ್ಯಾಯ ನೀಡಿ: ಅತ್ಯಾಚಾರ ಸಂತ್ರಸ್ತೆಯ ತಾಯಿಯಿಂದ ಸರಕಾರಕ್ಕೆ ಮನವಿ

Update: 2018-09-16 16:46 GMT

ಹೊಸದಿಲ್ಲಿ, ಸೆ.16: ಸರಕಾರದಿಂದ ಕುಟುಂಬಕ್ಕೆ ಸಿಕ್ಕ ಎರಡು ಲಕ್ಷ ರೂ.ಗಳ ಚೆಕ್ ಅನ್ನು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ನಿರಾಕರಿಸಿದ್ದಾರೆ.

“2 ಲಕ್ಷ ರೂ.ಗಳ ಚೆಕ್ ನೀಡಲಾಗಿತ್ತು. ಯಾವೊಬ್ಬ ಆರೋಪಿಯನ್ನೂ ಬಂಧಿಸದ ಸಮಯದಲ್ಲಿ ನಮಗಿದನ್ನು ನೀಡಲಾಗಿದೆ. ಕೆಲವು ಸರಕಾರಿ ಅಧಿಕಾರಿಗಳು ಬಂದು ನನ್ನ ಪತಿಗೆ ಚೆಕ್ ನೀಡಿದರು. ನ್ಯಾಯ ನೀಡುವುದನ್ನು ಬಿಟ್ಟು ಅವರು ಚೆಕ್ ನೀಡುತ್ತಿದ್ದಾರೆ. ಅವರು ನಮಗೆ ಚೆಕ್ ನೀಡಿದ್ದಾರೆ. ನಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆಯಿದೆ. ನಮಗೆ ನ್ಯಾಯ ಬೇಕೆ ಹೊರತು ಚೆಕ್ ಅಲ್ಲ” ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿನ ವೈದ್ಯರು ತನ್ನ ಪುತ್ರಿಯನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದೂ ಅವರು ಆರೋಪಿಸಿದರು. ಯುಪಿಎಸ್ಸಿ ಟಾಪರ್ ಆಗಿದ್ದ ಈ ಯುವತಿಯನ್ನು ಮೂವರು ಅತ್ಯಾಚಾರಗೈದಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News