ಸಂಜೀವ್ ರ ಸದ್ದಡಗಿಸಲು ಯತ್ನಿಸಿದರೆ ಸಾವಿರಾರು ಮಂದಿ ಧ್ವನಿಯೆತ್ತಲಿದ್ದಾರೆ ಎಂದು ತೋರಿಸಿ: ಪತ್ನಿ ಶ್ವೇತಾ ಭಟ್ ಕರೆ

Update: 2018-09-16 18:17 GMT

ಹೊಸದಿಲ್ಲಿ, ಸೆ.16: 22 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪರ ಸಾಮಾಜಿಕ ಜಾಲತಾಣದಲ್ಲಿ ಧ್ವನಿಯೆತ್ತಲು ಪತ್ನಿ ಶ್ವೇತಾ ಭಟ್ ಕರೆ ನೀಡಿದ್ದಾರೆ.

ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿರುವ ಅವರು, “ಈಗ ಸಂಜೀವ್ ಹೇಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಕಳೆದ 12 ದಿನಗಳಿಂದ ನಾನು ಅವರನ್ನು ನೋಡಿಲ್ಲ ಮತ್ತು ಅವರ ಬಗ್ಗೆ ಕೇಳಿಲ್ಲ. ಅವರು ಏನು ತಪ್ಪು ಮಾಡಿದ್ದರು ಎಂದು ಅರ್ಥ ಮಾಡಿಕೊಳ್ಳಲು ನಾನು ಸೋತಿದ್ದೇನೆ. ಕೇವಲ ಅವರು ಹಲವು ಭಾರತೀಯರ ಧ್ವನಿಯಾಗಿದ್ದಕ್ಕೆ  ಅವರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಸಂಜೀವ್ ರ ಧ್ವನಿಯನ್ನು ಮೌನವಾಗಿಸಲು ಯತ್ನಿಸಿದರೆ ಅವರ ಬದಲಾಗಿ ಸಾವಿರಾರು ಮಂದಿ ಧ್ವನಿಯೆತ್ತಲಿದ್ದಾರೆ ಎಂದು ತೋರಿಸಿ. ಸಂಜೀವ್ ಏಕಾಂಗಿಯಲ್ಲ ಎಂಬುದನ್ನು ಅವರಿಗೆ ತೋರಿಸಿ. ಈ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನ್ಯಾಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದವರಿಗಾಗಿ ನಾವು ಈ ಹೋರಾಟ ಮಾಡುತ್ತಿದ್ದೇವೆ. ಇದು ನ್ಯಾಯಕ್ಕಾಗಿ ಹೋರಾಡುವ ಸಮಯ. ಸಂಜೀವ್ ರನ್ನು ಮನೆಗೆ ಕರೆದೊಯ್ಯಲು ನನಗೆ ನೆರವಾಗಿ” ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಭಟ್ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. #Enoughisenough #JusticeforSanjivBhatt ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News