ರೂಪಾಯಿ ಕುಸಿತ: 505 ಅಂಕ ಕೆಳಗಿಳಿದ ಸೆನ್ಸೆಕ್ಸ್

Update: 2018-09-17 14:27 GMT

ಮುಂಬೈ, ಸೆ.17: ರೂಪಾಯಿ ಕುಸಿತವನ್ನು ಹತೋಟಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರಕಾರ ಭರವಸೆ ನೀಡಿದ್ದರೂ ಜಾಗತಿಕ ವ್ಯಾಪಾರ ಸಮರ ಮತ್ತು ರೂಪಾಯಿ ಮೌಲ್ಯದಲ್ಲಿ ನಿರಂತರ ಕುಸಿತದ ಪರಿಣಾಮವಾಗಿ ಹೂಡಿಕೆದಾರರು ಹಿಂಜರಿಯುತ್ತಿರುವ ಕಾರಣ ಸೋಮವಾರ ಸೆನ್ಸೆಕ್ಸ್ 505 ಅಂಕಗಳ ಕುಸಿತವನ್ನು ದಾಖಲಿಸಿತು.

ಸೆನ್ಸೆಕ್ಸ್ 38,000 ಮಟ್ಟಕ್ಕಿಂತ ಕೆಳಗೆ ಕುಸಿದರೆ ನಿಫ್ಟಿ ಕೂಡಾ 137 ಅಂಕಗಳನ್ನು ಕಳೆದುಕೊಂಡು 11,400ರ ಮಟ್ಟದಿಂದ ಕೆಳಗೆ ಕೊನೆಯಾಯಿತು. ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವ್ಯಾಪಾರ ಸಮರವು ಏಶ್ಯಾ ಮತ್ತು ಯೂರೋಪ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಸ್ವದೇಶಿ ಹೂಡಿಕೆದಾರೂ ಹಿಂಜರಿಯುವಂತೆ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಿನದ ಆರಂಭದಲ್ಲಿ 38,027.81 ಅಂಕಗಳೊಂದಿಗೆ ವ್ಯವಹಾರ ಆರಂಭಿಸಿದ ಬಿಎಸ್‌ಇ ಸೆನ್ಸೆಕ್ಸ್ 38,000 ಮಟ್ಟದಿಂದ ಕುಸಿದು 37,548.93ಕ್ಕೆ ತಲುಪಿತು. ಅಂತಿಮವಾಗಿ 37,585.51 ಅಂಕಗಳಿಗೆ ದಿನದ ವಹಿವಾಟನ್ನು ಕೊನೆಗೊಳಿಸಿತು.

ಇದೇ ವೇಳೆ, ಎನ್‌ಎಸ್‌ಇ ನಿಫ್ಟಿ ದಿನದ ವಹಿವಾಟಿನಲ್ಲಿ 11,366.90 ಅಂಕಗಳ ಕುಸಿತ ಕಂಡು ಅಂತಿಮವಾಗಿ 11,377.75 ಅಂಕಗಳಿಗೆ ವ್ಯವಹಾರವನ್ನು ಕೊನೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News