ನಿರ್ದಿಷ್ಟ ಪಕ್ಷವೊಂದರ ಪರ ಕೆಲಸ ಮಾಡುವಂತೆ ಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ ಹೇಳಿಲ್ಲ: ಮೋಹನ್ ಭಾಗವತ್
Update: 2018-09-18 20:37 IST
ಹೊಸದಿಲ್ಲಿ, ಸೆ.18: ಆರೆಸ್ಸೆಸ್ ಯಾವತ್ತೂ ತನ್ನ ಕಾರ್ಯಕರ್ತರಿಗೆ ನಿರ್ದಿಷ್ಟ ಪಕ್ಷವೊಂದರ ಪರ ಕೆಲಸ ಮಾಡುವಂತೆ ಯಾವತ್ತೂ ಹೇಳುವುದಿಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವವರನ್ನು ಮಾತ್ರ ಬೆಂಬಲಿಸಬೇಕು ಎಂದು ಹೇಳುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
“ಆರೆಸ್ಸೆಸ್ ರಾಜಕೀಯದಿಂದ ಅಂತರ ಕಾಪಾಡಿಕೊಳ್ಳುತ್ತದೆ. ಆದರೆ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಕೆಲವೊಂದು ದೃಷ್ಟಿಕೋನಗಳಿವೆ” ಎಂದವರು ಹೇಳಿದರು.