ತ್ರಿವಳಿ ತಲಾಖ್ ರದ್ದತಿ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅಸ್ತು

Update: 2018-09-19 07:12 GMT

ಹೊಸದಿಲ್ಲಿ, ಸೆ.19:  ತ್ರಿವಳಿ ತಲಾಖ್ ರದ್ಧತಿ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್ ರದ್ಧತಿ ಸುಗ್ರೀವಾಜ್ಞೆಗೆ ಸಮ್ಮತಿ  ನೀಡಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಈ ವಿಧೇಯಕವನ್ನು ಅಂಗೀಕರಿಸಲಾಗಿತ್ತು.

ತ್ರಿವಳಿ ತಲಾಖ್ ನೀಡುವುದು ಕ್ರಿಮಿನಲ್ ಅಪರಾಧ . ತ್ರಿವಳಿ ತಲಾಖ್ ನೀಡಿದರೆ  ಮೂರು ವರ್ಷಗಳ  ಜೈಲು ಶಿಕ್ಷೆ, ದಂಡ ವಿಧಿಸಬಹುದು. ಕ್ರಿಮಿನಲ್​​ ಪ್ರಕರಣದಡಿ ಬಂಧಿಸಿ ವಿಚಾರಣೆ ನಡೆಸಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಆದರೆ   ಕೆಲವು ಸದಸ್ಯರ ವಿರೋಧದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಈ ವಿಧೇಯಕವನ್ನು ರಾಜ್ಯಸಭೆಯಲ್ಲಿ  ತಡೆ ಹಿಡಿಯಲಾಗಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News