ಪಾಕಿಸ್ತಾನ 162ಕ್ಕೆ ಆಲೌಟ್

Update: 2018-09-19 15:04 GMT

ದುಬೈ, ಸೆ.19: ಏಶ್ಯಕಪ್ ಟೂರ್ನಮೆಂಟ್‌ನ ಹೈವೋಲ್ಟೇಜ್ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಶಿಸ್ತುಬದ್ಧ ದಾಳಿಗೆ ಸಿಲುಕಿದ ಪಾಕಿಸ್ತಾನ 43.1 ಓವರ್‌ಗಳಲ್ಲಿ 162ಕ್ಕೆ ಆಲೌಟಾಗಿದೆ.

ಪಾಕಿಸ್ತಾನದ ಬಾಬರ್ ಅಝಮ್(47) ಮತ್ತು ಶುಐಬ್ ಮಲಿಕ್(43) ಗರಿಷ್ಠ ರನ್ ದಾಖಲಿಸಿದರು. ಫಹೀಮ್ ಅಶ್ರಫ್ (21) ಮತ್ತು ಮುಹಮ್ಮದ್ ಆಮಿರ್ (ಔಟಾಗದೆ 18) ಎರಡಂಕೆಯ ಕೊಡುಗೆ ನೀಡಿದರು. ತಂಡದ ಸಹ ಆಟಗಾರರು ಕಳಪೆ ಪ್ರದರ್ಶನ ನೀಡಿದರು.

 ಭಾರತದ ಭುವನೇಶ್ವರ ಕುಮಾರ್ 15ಕ್ಕೆ 3, ಕೇದಾರ್ ಜಾಧವ್ 23ಕ್ಕೆ 3, ಜಸ್‌ಪ್ರೀತ್ ಬುಮ್ರಾ 23ಕ್ಕೆ 2 ಮತ್ತು ಕುಲ್‌ದೀಪ್ ಯಾದವ್ 37ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News