​ಅಮೆರಿಕದಲ್ಲಿ ಅತಿಹೆಚ್ಚು ಮಾತನಾಡುವ ಭಾರತೀಯ ಭಾಷೆ ಯಾವುದು ಗೊತ್ತೇ?

Update: 2018-09-21 04:03 GMT

ಮುಂಬೈ, ಸೆ.21: ಹಿಂದಿ ಭಾಷೆ ಅಮೆರಿಕದಲ್ಲಿ ಅತಿಹೆಚ್ಚು ಮಂದಿ ಮಾತನಾಡುವ ಭಾರತೀಯ ಭಾಷೆಯಾಗಿ ಮುಂದುವರಿದಿದೆ. ಗುಜರಾತಿ ಹಾಗೂ ತೆಲುಗು ನಂತರದ ಸ್ಥಾನಗಳಲ್ಲಿವೆ. ಆದರೆ 2010ರಿಂದ 2017ರ ಅವಧಿಯಲ್ಲಿ ಶೇಕಡ 86ರಷ್ಟು ಹೆಚ್ಚಳ ದಾಖಲಿಸಿರುವ ತೆಲುಗು ಭಾಷೆ ಅತಿವೇಗವಾಗಿ ಬೆಳೆಯುತ್ತಿರುವ ಭಾಷೆ ಎನಿಸಿಕೊಂಡಿದೆ.

ಇತ್ತೀಚೆಗೆ ಬಿಡುಗಡೆಯಾದ ಅಮೆರಿಕನ್ ಕಮ್ಯುನಿಟಿ ಸರ್ವೆ(ಎಸಿಎಸ್) ಅಂಕಿ ಅಂಶಗಳ ಪ್ರಕಾರ, ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟವರ ಪೈಕಿ ಶೇಕಡ 21.8 ಮಂದಿ ತಮ್ಮ ಮನೆಗಳಲ್ಲಿ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳನ್ನು ಬಳಸುತ್ತಾರೆ. ಒಟ್ಟು 30.5 ಕೋಟಿ ಮಂದಿಯ ಪೈಕಿ 6.7ಕೋಟಿ ಮಂದಿ ವಿದೇಶಿ ಭಾಷೆಗಳನ್ನು ಮನೆಯಲ್ಲಿ ಬಳಸುತ್ತಾರೆ.

ಅಮೆರಿಕದಲ್ಲಿ 8.63 ಲಕ್ಷ ಮಂದಿ ಹಿಂದಿ ಬಳಸಿದರೆ, ಗುಜರಾತಿ (4.34 ಲಕ್ಷ) ಮತ್ತು ತೆಲುಗು (4.15 ಲಕ್ಷ) ನಂತರದ ಸ್ಥಾನಗಳಲ್ಲಿವೆ.

ಕಳೆದ ಏಳು ವರ್ಷಗಳಲ್ಲಿ ತಮಿಳು ಮಾತನಾಡುವವರ ಸಂಖ್ಯೆ ಶೇಕಡ 86ರಷ್ಟು ಹೆಚ್ಚಳವಾಗಿದ್ದು, ಹಿಂದಿ ಹಾಗೂ ಗುಜರಾತಿ ಕ್ರಮವಾಗಿ ಶೇಕಡ 42 ಮತ್ತು ಶೇಕಡ 22 ಪ್ರಗತಿ ದಾಖಲಿಸಿವೆ ಎಂದು ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್ ವಿಶ್ಲೇಷಿಸಿದೆ. ಅಮೆರಿಕದಲ್ಲಿ ಒಟ್ಟು 26.10 ಲಕ್ಷ ಮಂದಿ ಭಾರತೀಯ ಸಂಜಾತರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News