ಗಿರ್ ಅರಣ್ಯದಲ್ಲಿ 11 ಸಿಂಹಗಳ ಸಾವು

Update: 2018-09-21 06:43 GMT

ಅಹ್ಮದಾಬಾದ್: ಸೆ.21: ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ  ಸಂಭವಿಸಿದ  ಕಾದಾಟದಲ್ಲಿ 11 ಸಿಂಹಗಳು ಸಾವನ್ನಪ್ಪಿವೆ ಎಂದು  ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ  ಸರಕಾರ ತನಿಖೆಗೆ ಆದೇಶ ನೀಡಿದೆ. ಕೆಲವು ದಿನಗಳ ಹಿಂದೆ  ಗಿರ್ ಅರಣ್ಯ ಪ್ರದೇಶದ ದಾಲ್ಕನಿಯಾ ರೇಂಜ್ ನಲ್ಲಿ 7 ಸಿಂಹಗಳ ಶವ ಪತ್ತೆಯಾಗಿತ್ತು. ಬುಧವಾರ ರಾಜುಲಾದಲ್ಲಿ  1 ಸಿಂಹದ ಕಳೇಬರ  ಕಂಡು ಬಂದಿತ್ತು ಅದೇ ದಿನ ದಾಲ್ಕನಿಯಾದಲ್ಲಿ  ಮತ್ತೆ 3 ಸಿಂಹಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.  ಇದರೊಂದಿಗೆ  ಸಿಂಹಗಳ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು  ಮೂಲಗಳು ತಿಳಿಸಿವೆ.

 ಸಿಂಹಗಳ ಕಳೇಬರವನ್ನು  ಜುನಾಘಡ್ ನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಂಹಗಳು  ಕಾದಾಟದಿಂದ ಸಾವಿಗೀಡಾಗಿದೆ  ಎಂದು ಹೇಳಲಾಗುತ್ತಿದ್ದರೂ  ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News