ಕೇವಲ 35 ನಿಮಿಷಗಳ ಈ ಅಭ್ಯಾಸ ವಯಸ್ಸಾದವರನ್ನು ಪಾರ್ಶ್ವವಾಯು ಅಪಾಯದಿಂದ ಪಾರು ಮಾಡುತ್ತದೆ

Update: 2018-09-21 11:14 GMT

ವಯಸ್ಸಾದ ವ್ಯಕ್ತಿಗಳು ಪ್ರತಿದಿನ ಕೇವಲ 35 ನಿಮಿಷಗಳ ಅಥವಾ ವಾರದಲ್ಲಿ ನಾಲ್ಕು ಗಂಟೆಗಳ ನಡಿಗೆಯನ್ನು ಮಾಡುವುದರಿಂದ ತಾವು ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯದಿಂದ ಪಾರಾಗಬಹುದು.

ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸದ ಸೋಮಾರಿಗಳಿಗೆ ಹೋಲಿಸಿದರೆ ವಾರಕ್ಕೆ ಕೇವಲ 2ರಿಂದ 3 ಗಂಟೆಗಳ ಕಾಲ ಈಜು,ಬಿರುಸಿನ ನಡಿಗೆ ಅಥವಾ ಓಟದಲ್ಲಿ ತೊಡಗಿಕೊಂಡರ ವ್ಯಕ್ತಿಗಳಲ್ಲಿ ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗುತ್ತದೆ ಎನ್ನುವುದನ್ನು ಜರ್ನಲ್ ನ್ಯೂರಾಲಜಿಯಲ್ಲಿ ಪ್ರಕಟಗೊಂಡಿರುವ ಸಂಶೋನಾ ವರದಿಯು ಬೆಟ್ಟುಮಾಡಿದೆ.

ಸ್ವೀಡನ್‌ನ ಗೊಥೆನ್‌ಬರ್ಗ್ ವಿವಿಯ ಕ್ಯಾಥರಿನಾ ಎಸ್.ಸನರ್‌ಹೇಗನ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದ ಸಂಶೋಧನೆಗಾಗಿ ತಂಡವು ಪಾರ್ಶ್ವವಾಯು ಪೀಡಿತರಾಗಿದ್ದ 73 ವರ್ಷ ಸರಾಸರಿ ವಯೋಮಾನದ 925 ಜನರನ್ನು ಸಮೀಕ್ಷೆಗೊಳಪಡಿಸಿತ್ತು.

ಪಾರ್ಶ್ವವಾಯು ಗಂಭೀರ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಪಾರ್ಶ್ವವಾಯುವನ್ನು ತಡೆಯಲು ಅಥವಾ ಪಾರ್ಶ್ವವಾಯುನಿಂದ ಉಂಟಾದ ಹಾನಿಯನ್ನು ತಗ್ಗಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ. ವ್ಯಾಯಾಮವು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆಯಾದರೂ,ವಾರದಲ್ಲಿ ಕೆಲವೇ ಸಮಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೂ ನಂತರದ ದಿನಗಳಲ್ಲಿ ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂದು ಕ್ಯಾಥರಿನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News