ನನ್ನ ಮಾಸ್ಕ್ ರಕ್ತದಿಂದ ತುಂಬಿತ್ತು: ಜೆಟ್ ಏರ್‌ವೇಸ್ ಪ್ರಯಾಣಿಕ

Update: 2018-09-21 16:19 GMT

ಮುಂಬೈ, ಸೆ. 21: ಮುಂಬೈಯಿಂದ ಜೈಪುರಕ್ಕೆ ಸಂಚರಿಸುವ ಜೆಟ್ ಏರ್‌ವೇಸ್‌ನಲ್ಲಿ ಗುರುವಾರ ಬೆಳಗ್ಗೆ ಕೆಲವರು ವಿಮಾನದ ಒಳಗಡೆ ಉಸಿರುಗಟ್ಟುವಂತಾಗುತ್ತಿರುವ ಬಗ್ಗೆ ತಿಳಿಸಿದರು. ಸರಿ ಸುಮಾರು 15 ನಿಮಿಷಗಳ ಬಳಿಕ ಆಮ್ಲಜನಕದ ಮಾಸ್ಕ್ (ವಿಮಾನದ ಒಳಗಡೆ ಆಮ್ಲಜನಕದ ಪ್ರಮಾಣ ಕಡಿಮೆ ಆದಾಗ, ಆಮ್ಲ ಜನಕ ಪೂರೈಸುವ ಮಾಸ್ಕ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾಂತ್ರಿಕವಾಗಿ ಕೆಳಗೆ ಇಳಿ ಬೀಳುತ್ತದೆ.) ಕೆಳಗೆ ಬಿತ್ತು. ಪ್ರಯಾಣಿಕ ಅಂಕುಲ್ ಕಲಾ ಆ ಮಾಸ್ಕ್ ಅನ್ನು ಮುಖಕ್ಕೆ ಇಟ್ಟುಕೊಂಡರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವರು ಮಾಸ್ಕ್ ತೆಗೆದಾಗ ಅದರ ತುಂಬ ರಕ್ತವಿತ್ತು. ಜೆಟ್ ಏರ್‌ವೇಸ್‌ನ ವಿಮಾನ 9ಡಬ್ಲು 697ರಲ್ಲಿ ಕ್ಯಾಬಿನ್ ಗಾಳಿ ಒತ್ತಡ ಕಡಿಮೆ ಆದ ಪರಿಣಾಮ ಮೂಗು, ಬಾಯಿಗಳಲ್ಲಿ ರಕ್ತಸ್ರಾವವಾದ, ತಲೆನೋವು ಕಾಣಿಸಿಕೊಂಡ 30 ಪ್ರಯಾಣಿಕರಲ್ಲಿ ಕಲಾ ಕೂಡ ಒಳಗೊಂಡಿದ್ದಾರೆ.

ಕಾಕ್‌ಪಿಟ್ ಸಿಬ್ಬಂದಿ ವಿಮಾನದಲ್ಲಿ ಗಾಳಿ ಒತ್ತಡವನ್ನು ನಿರ್ವಹಿಸುವ ಸ್ವಿಚ್ ಅನ್ನು ಆನ್ ಮಾಡದೇ ಇರುವುದು ಇದಕ್ಕೆ ಕಾರಣವಾಗಿತ್ತು. ‘‘ಕಡಿಮೆ ಗಾಳಿ ಒತ್ತಡದ ಪರಿಣಾಮ ನನಗೆ ತೀವ್ರವಾದ ತಲೆನೋವು’’ ಉಂಟಾಯಿತು ಎಂದು ಕಲಾ ಹೇಳಿದ್ದಾರೆ. ‘‘ಆದಾಗ್ಯೂ, ಪ್ರಯಾಣಿಕರು ಉತ್ತಮವಾಗಿ ಸಹಕರಿಸಿದರು. ಆಮ್ಲಜನಕದ ಮಾಸ್ಕ್ ಒದಗಿಸಿದ ಬಳಿಕ ಸಿಬ್ಬಂದಿ ಸೂಚನೆ ಅನುಸರಿಸಿದರು. ಕಡಿಮೆ ಆಗುತ್ತಿರುವ ಗಾಳಿ ಒತ್ತಡವನ್ನು ನಿರ್ವಹಿಸುವುದು ಕಷ್ಟಕರ ಎಂಬುದನ್ನು ಕೆಲವರು ತಿಳಿದುಕೊಂಡರು. ನನ್ನ ಹಿಂದೆ ಕುಳಿತಿದ್ದ ಮಹಿಳೆಯೋರ್ವರು ಕಿವಿ ನೋವಿನಿಂದ ಎರಡು ಬಾರಿ ಚೀರಿದರು’’ ಎಂದು ಹೆಸರು ಹೇಳಲಿಚ್ಛಿಸದ ಪ್ರಯಾಣಿಕರೋರ್ವರು ತಿಳಿಸಿದ್ದಾರೆ.

ಕಲಾ ಅವರು ಜೆಟ್ ಏರ್‌ವೇಸ್‌ನಿಂದ 30 ಲಕ್ಷ ಪರಿಹಾರ ಹಾಗೂ 100 ಸುಧಾರಿತ ವೋಚರ್ ನೀಡುವಂತೆ ಆಗ್ರಹಿಸಿದ್ದಾರೆ. ‘‘ನಾವು ನಮ್ಮ ಕಿವಿಗಳನ್ನು ಮುಚ್ಚಿಕೊಂಡೆವು ಹಾಗೂ ಆಮ್ಲಜನಕದ ಮಾಸ್ಕ್ ಅನ್ನು ಕೈಯಲ್ಲಿ ಹಿಡಿದುಕೊಂಡೆವು. ಆದರೆ, ಅದು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ತ ಸ್ರಾವವಾಗುತ್ತಿದೆ ಎಂದು ನಾನು ಸಹ

ಪ್ರಯಾಣಿಕರೋರ್ವರಲ್ಲಿ ತಿಳಿಸಿದೆ ಹಾಗೂ ಗಗನ ಸಖಿಯತ್ತ ಕೈ ಬೀಸಿದೆ. ಆದರೆ, ಗಗನಸಖಿ ಸೀಟಿನಲ್ಲಿ ಕುಳಿತುಕೊಳ್ಳಿ. ಎಲ್ಲವೂ ಸರಿಯಾಗುತ್ತದೆ’’ ಎಂದರು. ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News