‘ಸೂಪರ್ ಹೀರೋ’ ಅವತಾರದಲ್ಲಿ ನಟಿಸಲಿದ್ದಾರೆಯೇ ವಿರಾಟ್ ಕೊಹ್ಲಿ?

Update: 2018-09-22 13:04 GMT

ಹೊಸದಿಲ್ಲಿ, ಸೆ.22: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಅವರು ಸೂಪರ್ ಹೀರೋ ಅವತಾರದಲ್ಲಿರುವ ‘ಟ್ರೈಲರ್ : ದಿ ಮೂವಿ' ಸೆಪ್ಟೆಂಬರ್ 28ಕ್ಕೆ  ಬಿಡುಗಡೆಗೆ ಸನ್ನದ್ಧವಾಗಿದೆಯೆಂಬ ಟ್ವೀಟ್ ಅನ್ನು ಸ್ವತಃ ಕೊಹ್ಲಿ ಮಾಡಿದ್ದಾರೆ.

ತಾನು ದಶಕದ ನಂತರ ಇನ್ನೊಂದು ಕ್ಷೇತ್ರದಲ್ಲಿ `ಚೊಚ್ಚಲ' ಪ್ರಯತ್ನ  ನಡೆಸುತ್ತಿರುವುದಾಗಿಯೂ ಕೊಹ್ಲಿ ಟ್ವೀಟ್ ನಲ್ಲಿ ಬರೆದಿದ್ದಾರೆ. ಅಂದ ಹಾಗೆ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರ `ಸೂಯಿ ಧಾಗ: ಮೇಡ್ ಇನ್ ಇಂಡಿಯಾ'' ಕೂಡ ಅದೇ ದಿನ ಬಿಡುಗಡೆಗೊಳ್ಳಲಿದೆ. ಕೊಹ್ಲಿಯ ಟ್ರೈಲರ್ ಬಗ್ಗೆ ಅವರೇನೂ ಹೆಚ್ಚು ಹೇಳಿಕೊಂಡಿಲ್ಲವಾದರೂ ಅವರು ನಟನಾ ಕ್ಷೇತ್ರಕ್ಕೂ ಪ್ರವೇಶಿಸಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಕೊಹ್ಲಿ ಅವರು ಕಾಣಿಸಿರುವ ಹಲವು ಜಾಹೀರಾತುಗಳಲ್ಲಿ ಅವರ ನಟನಾ ಕೌಶಲ್ಯವನ್ನು ಅವರ ಅಭಿಮಾನಿಗಳು ಈಗಾಗಲೇ ಹೊಗಳಿದ್ದಾರೆ.

`ಸೂಯಿ ಧಾಗ' ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿದ್ದರೆ ವರುಣ್ ಧವನ್ ನಾಯಕರಾಗಿದ್ದಾರೆ. ದಂಪತಿಯೊಂದು ಮೇಕ್ ಇನ್ ಇಂಡಿಯಾ ಆಶಯದಂತೆ  ತಮ್ಮದೇ ಉದ್ಯಮ ನಡೆಸುವ ಕಥೆಯ ಚಿತ್ರವಿದು. ಶರತ್ ಕಟಾರಿಯಾ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News