ವಸುಂಧರಾ ರಾಜೆ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಐಪಿಎಸ್ ಅಧಿಕಾರಿಯ ಪತ್ನಿ

Update: 2018-09-23 14:59 GMT

ಜೈಪುರ,ಸೆ.23: 2009ನೇ ಸಾಲಿನ ತಂಡದ ರಾಜಸ್ಥಾನ ಕೇಡರ್‌ನ ಐಪಿಎಸ್ ಅಧಿಕಾರಿ ಪಂಕಜ್ ಚೌಧರಿಯವರ ಪತ್ನಿ ಮುಕುಲ್ ಚೌಧರಿ ಅವರು ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಹಾಲಿ ಪ್ರತಿನಿಧಿಸುತ್ತಿರುವ ಝಾಲರಾಪಾಟನ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ರಾಜೆ ವಿರುದ್ಧ ಸ್ಪರ್ಧಿಸುವ ತನ್ನ ನಿರ್ಧಾರವು ಬಿಜೆಪಿ ಆಡಳಿತದಲ್ಲಿ ಜನರು ಎದುರಿಸುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡಲು ಪ್ರಜಾಸತ್ತಾತ್ಮಕ ವಿಧಾನವಾಗಿದೆ. ಭ್ರಷ್ಟಾಚಾರ ಮತ್ತು ದುರಾಡಳಿತಗಳನ್ನು ಮುಖ್ಯ ವಿಷಯಗಳನ್ನಾಗಿಟ್ಟುಕೊಂಡು ತನ್ನ ಜನ್ಮಸ್ಥಳವೂ ಆಗಿರುವ ಝಾಲರಾಪಾಟನ್‌ನಿಂದ ಸ್ಪರ್ಧಿಸಲಿದ್ದೆನೆ. ತಾನು ಇವುಗಳ ವಿರುದ್ಧ ತಳಮಟ್ಟದಲ್ಲಿ ಹೋರಾಡುತ್ತಿದ್ದೇನೆ ಎಂದು ಮುಕುಲ್ ಹೇಳಿದರು.

ತನ್ನ ಪತಿಯು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕಾಗಿ ಅವರನ್ನು ಶೋಷಿಸಲಾಗುತ್ತಿದೆ,ಅವರಿಗೆ ಚಾರ್ಜಶೀಟ್‌ಗಳನ್ನು ಜಾರಿಗೊಳಿಸಲಾಗಿದೆ ಮತ್ತು ಪದೇ ಪದೇ ವರ್ಗಾವಣೆಗೊಳಿಸಲಾಗುತ್ತಿದೆ. ತನ್ನ ಪತಿ ಅಪರಾಧ ಮತ್ತು ಭ್ರಷ್ಟಾಚಾರಗಳ ವಿರುದ್ಧ ಹೋರಾಡುತ್ತಿದ್ದಾರೆ. ತಾನು ಅದನ್ನೇ ಮಾಡುತ್ತೇನೆ,ಆದರೆ ವಿಭಿನ್ನವಾದ ಮಾರ್ಗದಲ್ಲಿ ಎಂದು ಅವರು ತಿಳಿಸಿದರು.

ಪಂಕಜ್ ಚೌಧರಿ ಅವರು ಜೈಪುರದಲ್ಲಿ ರಾಜ್ಯ ಅಪರಾಧ ದಾಖಲೆಗಳ ಘಟಕದಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಕುಲ್ ಅವರ ತಾಯಿ ಶಶಿ ದತ್ತಾ 1993ರಲ್ಲಿ ಅಂದಿನ ಬಿಜೆಪಿ ಸರಕಾರದಲ್ಲಿ ಕಾನೂನು ಸಚಿವೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News