ಮುಝಫ್ಫರ್‌ಪುರ್‌ ಮಾಜಿ ಮೇಯರ್ ಸಹಿತ ಇಬ್ಬರ ಗುಂಡಿಕ್ಕಿ ಹತ್ಯೆ

Update: 2018-09-23 18:17 GMT

ಮುಝಫ್ಫರ್‌ಪುರ, ಸೆ.23: ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯ ಮಾಜಿ ಮೇಯರ್ ಸಮೀರ್ ಕುಮಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ರವಿವಾರ ನಡೆದಿದೆ. ಮುಝಫ್ಫರ್‌ಪುರ್‌ನ ಬನಾರಸ್ ಚೌಕ್ ಬಳಿ ನಡೆದ ಈ ಘಟನೆಯಲ್ಲಿ ಕುಮಾರ್ ಜೊತೆಗೆ ಅವರ ಕಾರು ಚಾಲಕನನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮಗೆ ಸ್ಥಳದಲ್ಲಿ ಆರು ಕ್ಯಾಟ್ರಿಜ್‌ಗಳು ದೊರಕಿವೆ. ಹಾಗಾಗಿ ದುಷ್ಕರ್ಮಿಗಳು ಕುಮಾರ್ ಮತ್ತವರ ಚಾಲಕನ ಮೇಲೆ 17-18 ಸುತ್ತು ಗುಂಡು ಹಾರಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತದೇಹಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News