ಯುವಜನರಿಗೆ ಅಲ್ಲಲ್ಲಿ ನೋವು ಕಾಡುವುದೇಕೆ ?

Update: 2018-09-23 17:48 GMT

ನೀವು ಕಾಲೇಜು ಶಿಕ್ಷಣ ಮುಗಿಸಿದ ತನ್ಷಣ ಕಾಲ್‍ಸೆಂಟರ್ ನಲ್ಲಿ ಉದ್ಯೋಗ ಪಡೆದ ಅದೃಷ್ಟವಂತರೆಂದುಕೊಳ್ಳಿ. ಆ ಕ್ಷಣದಿಂದ ನೀವು ಗಂಟೆಗಟ್ಟಲೆ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಮೂಲಕ ಡೆಸ್ಕ್ ಗೆ ಕಟ್ಟಿಹಾಕಲ್ಪಡುತ್ತೀರಿ. ಶೀಘ್ರವೇ ನಿಮಗೆ ಕತ್ತಿನಲ್ಲಿ ಸ್ವಲ್ಪ ನೋವು, ಮರಗಟ್ಟುವಿಕೆಯ ಅನುಭವವಾಗುತ್ತದೆ. ಬಳಿಕ ನಿಮ್ಮ ಬೆನ್ನಿನ ಮೇಲ್ಭಾಗ/ ಭುಜದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಂತಿಮವಾಗಿ ನಿಮಗೆ ಕೈನೋವೂ ಕಾಡಲಾರಂಭಿಸುತ್ತದೆ!

ನಿಮಗೆ ನೀವೇ ಹೇಳಿಕೊಳ್ಳುತ್ತೀರಿ: ನಾನಿನ್ನೂ ಯುವಕ/ಯುವತಿ. ಇಷ್ಟು ಸಣ್ಣ ವಯಸ್ಸಿನಲ್ಲೇ ನೋವು ಕಾಡುವುದೇಕೆ? ಆದರೆ ನಿಮಗೆ ಆಗುವ ಅನುಭವ ವಿಚಿತ್ರ ಅಥವಾ ಅಸಾಮಾನ್ಯವೇನಲ್ಲ. ಇದನ್ನು ಮೌಸ್ ನೆಕ್/ ಶೋಲ್ಡರ್ ಎಂದು ಕರೆಯಲಾಗುತ್ತದೆ. ಇದನ್ನು ಪುನರಾವರ್ತಿಸುವ ಆಯಾಸದ ಗಾಯ (ಆರ್‍ಎಸ್‍ಐ) ಎಂದು ಪರಿಗಣಿಸುತ್ತೇವೆ.
ಆರ್ ಎಸ್‍ಐ ಅಥವಾ ಪದೇ ಪದೇ ಚಲನೆಯ ಗಾಯವು ಬಹುತೇಕ ಮಾಸಖಂಡ ಮತ್ತು ಅಸ್ಥಿ ವ್ಯತ್ಯಯಕ್ಕೆ ಸಂಬಂಧಿಸಿದ್ದು. ಇದು ಮಾಸಖಂಡ, ಸ್ನಾಯುರಜ್ಜು, ಕೀಲು ಅಥವಾ ನರಕ್ಕೆ ಹಾನಿ ಉಂಟು ಮಾಡಬಹುದು. ಸಾಮಾನ್ಯವಾಗಿ ಆರ್‍ಎಸ್‍ಐಗೆ ಮುಖ್ಯ ಕಾರಣ ಅಸಮರ್ಪಕವಾಗಿ ವಿನ್ಯಾಸಗೊಳಿಸಲಾದ ಕೆಲಸದ ಸ್ಥಳಗಳು; ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಹಾಗೂ ದೈಹಿಕ ದಾಢ್ರ್ಯತೆಯ ಕೊರತೆ.
ಪದೇ ಪದೇ ಆಗುವ ಕಾಯವು ಪದೇ ಪದೇ ಅಂಗಾಶಗಳ ಸೂಕ್ಷ್ಮ ಆಘಾತಕ್ಕೆ ಕಾರಣವಾಗುತ್ತದೆ. ಇದು ಮಾಮೂಲಿ ದುರಸ್ತಿ ಪ್ರಕ್ರಿಯೆಯನ್ನು ಹಾಳು ಮಾಡುತ್ತದೆ. ಪರಿಣಾಮವಾಗಿ ರಕ್ತ ಪರಿಚಲನೆ ಕುಂಠಿತವಾಗುತ್ತದೆ. ನರಗಳ ಚಟುವಟಿಕೆಗಳು ಕಡಿಮೆಯಾಗುತ್ತವೆ. ಮಾಂಸಖಂಡದ ಸ್ಥಿತಿಸ್ಥಾಪಕತ್ವ ನಷ್ಟವಾಗುತ್ತದೆ ಮತ್ತು ಕೆಲವೊಮ್ಮೆ ಕೋಶಗಳ ಸಾವಿಗೂ ಕಾರಣವಾಗುತ್ತದೆ. ಆರ್‍ಎಸ್‍ಐ ಸಮಸ್ಯೆ ಇರುವ ಕೆಲವರು ಅಸಾದ್ಯ ನೋವು ಅನುಭವಿಸುತ್ತಾರೆ. ಇತರ ಬಹುತೇಕ ಮಂದಿ ಬಲ ಕಳೆದುಕೊಳ್ಳುತ್ತಾರೆ ಹಾಗೂ ಮಾಂಸಖಂಡದ ನಿಯಂತ್ರಣ ಕಳೆದುಕೊಳ್ಳುತ್ತಾರೆ.

ಕುತ್ತಿಗೆಯ ಸಣ್ಣ ನೋವು ತೀವ್ರವಾಗುವುದು ಹೇಗೆ!

ಕೆಟ್ಟದಾಗಿ ವಿನ್ಯಾಸಗೊಳಿಸಲಾದ ಕೆಲಸದ ಸ್ಥಳಗಳಲ್ಲಿ ಹಲವು ಗಂಟೆಗಳ ಕಾಲ ಕುಳಿತು ಕೆಲಸ ಮಾಡುವುದರಿಂದ ಮತ್ತು ವಿರಾಮದ ಅವಧಿಯನ್ನು ಮೊಬೈಲ್ ಸ್ಕ್ರೀನ್ ನೋಡುತ್ತಾ ಕುಳಿತುಕೊಳ್ಳುವುದರಿಂದ, ಅಂತಿಮವಾಗಿ ಸೂಕ್ತವಲ್ಲದ ದಿಂಬು ಬಳಸಿ ನಿದ್ದೆ ಮಾಡುವುದರಿಂದ, ಕತ್ತಿನಲ್ಲಿ ಸೆಟೆತ ಕಾಣಿಸಿಕೊಳ್ಳುತ್ತದೆ ಅಥವಾ ಅಲ್ಪ ಪ್ರಮಾಣದ ತಲೆನೋವಿನ ಅನುಭವವಾಗುತ್ತದೆ. ಇದನ್ನು ನಿರ್ಲಕ್ಷಿಸಿದಲ್ಲಿ, ಇದು ಮತ್ತಷ್ಟು ಹದಗೆಟ್ಟು, ದೈನಂದಿನ  ಚಟುವಟಿಕೆಗಳನ್ನು ಹಾಳುಗೆಡವುತ್ತದೆ. ನೀವು ಸಹಜವಾಗಿಯೇ ನೋವು ನಿವಾರಕ ಗುಳಿಗೆಗಳ ಮೊರೆ ಹೋಗುತ್ತೀರಿ ಹಾಗೂ ಆ ದಿನಕ್ಕೆ ಆರಾಮದ ಅನುಭವ ಪಡೆಯುತ್ತೀರಿ. ಆದರೆ ಕಾಲ ಕಳೆದಂತೆ ಈ ನೋವು ಹೆಚ್ಚುತ್ತಲೇ ಹೋಗುತ್ತದೆ.

ಕಾರಣ ಹುಡುಕಿ

ನಿಮ್ಮ ಕೆಲಸದ ಜಾಗವನ್ನು ಗಮನಿಸಿ. ನಿಮ್ಮ ಕಂಪ್ಯೂಟರ್ ಪರದೆ ಕಣ್ಣಿನ ಮಟ್ಟಕ್ಕೆ ಇದೆಯೇ? ಮೌಸ್ ಬಳಸುವಾಗ ನಿಮ್ಮ ಮಣಿಗಂಟು ಹಿಂದಕ್ಕೆ ಬಾಗುತ್ತದೆಯೇ? ನಿಮ್ಮ ಕೆಲಸದಡೆಸ್ಕ್ ನಿಮ್ಮ ಭುಜಕ್ಕಿಂತ ಎತ್ತರದಲ್ಲಿದೆಯೇ? ಟೈಪ್ ಮಾಡುವಾಗ ನಿಮ್ಮ ಮೊಣಗೈ ಮುಕ್ತವಾಗಿ ಇರುತ್ತದೆಯೇ? ನಿಮ್ಮ ಉತ್ತರ ಹೌದು ಎಂದಾದಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ.

ಆರ್ ಎಸ್‍ಐನಿಂದ ದೂರವಿರಬೇಕಾದರೆ ಇಲ್ಲಿದೆ ನಿಮ್ಮ ಕೆಲಸದ ಸ್ಥಳದ ಚೆಕ್‍ಲಿಸ್ಟ್.
1. ಕಂಪ್ಯೂಟರ್ ಪರದೆ ನಿಮ್ಮ ಕಣ್ಣಿನ ಮಟ್ಟಕ್ಕೆ ಇರಲಿ.
2. ನಿಮ್ಮ ಮಣಿಗಟ್ಟು ನೇರವಾಗಿರಲಿ
3. ನೀವು ಕುಳಿತಾಗ ನಿಮ್ಮ ಭುಜ ಹೆಗಲಿನಿಂದ ಮೇಲ್ಮಟ್ಟದಲ್ಲಿ ಇಲ್ಲದಿರಲಿ.
4. ಅಂತಿಮವಾಗಿ, ಕುರ್ಚಿಗಳು ನಿಮ್ಮ ಮೊಣಗೈಗೆ ಆಧಾರ ನೀಡುವಂತಿರಲಿ

ಗುಣಪಡಿಸುವಿಕೆ: ಚಾಚುವಿಕೆ ಹಾಗೂ ಬಲಗೊಳಿಸುವಿಕೆ
1. ನಿಮ್ಮ ಗಲ್ಲದ ಮೇಲೆ ಕೈ ಇಟ್ಟು ಕತ್ತನ್ನು ಎದೆಯತ್ತ ಚಾಚಿರಿ ಮತ್ತು ನೇರವಾಗಿ ಛಾವಣಿಯತ್ತ ನೋಡಿ. ನಿಮ್ಮ ತಲೆಯನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಿ. ಇಂಥ ಚಾಚುವಿಕೆಯನ್ನು 10 ಬಾರಿ ಮಾಡಿ.
2. ಪ್ರತಿ ಅರ್ಧಗಂಟೆಗೊಮ್ಮೆ ನಿಮ್ಮ ಕೆಲಸದ ಡೆಸ್ಕ್‍ನಿಂದ ಮೇಲೆದ್ದು, ಕೆಲ ಕಾಲ ಹೆಜ್ಜೆ ಹಾಕಿ.
3. ನಿಮ್ಮ ಕತ್ತನ್ನು ಬೆರಳಿನ ಸಹಾಯದಿಂದ ಹಿಂದಕ್ಕೆ ಗಲ್ಲದತ್ತ ತಳ್ಳುವ ಮೂಲಕ ಹೆಚ್ಚು ಬಲಗೊಳಿಸಿ. ಇದೇ ಭಂಗಿಯಲ್ಲಿ 10 ಸೆಕೆಂಡ್‍ಗಳ ಕಾಲ ಇರಿ. ದಿನಕ್ಕೆ ಹೀಗೆ ಮೂರು- ನಾಲ್ಕು ಬಾರಿ ಮಾಡಿ.

ಲೇಖಕ ಕಮಲ್ ಸಿಂಗ್ ಅವರು ಪ್ರಮಾಣಿತ ಬಲವರ್ಧನೆ ಮತ್ತು ಸರಿಪಡಿಸುವಿಕೆ ತಜ್ಞರು. 15 ವರ್ಷಗಳ ಅನುಭವ ಹೊಂದಿದ್ದಾರೆ.

Writer - ಕಮಲ್ ಸಿಂಗ್

contributor

Editor - ಕಮಲ್ ಸಿಂಗ್

contributor

Similar News