ಶಿಖರ್ ಧವನ್ ,ನಾಯಕ ರೋಹಿತ್ ಶರ್ಮ ಶತಕ

Update: 2018-09-23 18:40 GMT

ದುಬೈ, ಸೆ.23: ಪಾಕಿಸ್ತಾನ ವಿರುದ್ಧ ಏಶ್ಯ ಕಪ್ ನ ಸೂಪರ್  -4 ಹಂತದ ಪಂದ್ಯದಲ್ಲಿ ಭಾರತದ  ಆರಂಭಿಕ ದಾಂಡಿಗ ಶಿಖರ್ ಧವನ್  ಮತ್ತು ನಾಯಕ ರೋಹಿತ್  ಶರ್ಮ ಶತಕ ದಾಖಲಿಸಿದರು.

 ಧವನ್ 109ನೇ ಏಕದಿನ ಪಂದ್ಯದಲ್ಲಿ 95 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 15ನೇ  ಶತಕ ದಾಖಲಿಸಿದರು.

ರೋಹಿತ್ ಶರ್ಮ 187ನೇ ಏಕದಿನ ಪಂದ್ಯದಲ್ಲಿ 19ನೇ ಶತಕ ದಾಖಲಿಸಿದರು. ರೋಹಿತ್ 106 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಶತಕ ಪೂರೈಸಿದರು.

ಧವನ್ ಮತ್ತು ನಾಯಕ ರೋಹಿತ್ ಶರ್ಮ ಮೊದಲ  ವಿಕೆಟ್ ಗೆ 210 ರನ್ ಗಳ ಜೊತೆಯಾಟ ನೀಡಿದರು. ಧವನ್  114 ರನ್ (100ಎ, 16ಬೌ,2ಸಿ) ಗಳಿಸಿ ರನೌಟಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News