ಗಿಂಟಿಂಗ್ ಚೀನಾ ಓಪನ್ ಚಾಂಪಿಯನ್

Update: 2018-09-23 18:52 GMT

ಚಾಂಗ್‌ರೆ, ಸೆ.23: ಇಂಡೋನೇಶ್ಯದ ಅಂಥೋನಿ ಸಿನಿಸುಕಾ ಗಿಂಟಿಂಗ್ ರವಿವಾರ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಜಪಾನ್‌ನ ಕೆಂಟೊ ಮೊಮೊಟೊ ವಿರುದ್ಧ 23-21, 21-19 ಅಂತರದಲ್ಲಿ ಜಯ ಗಳಿಸಿದ ಗಿಂಟಿಂಗ್ ಪ್ರಶಸ್ತಿ ಎತ್ತಿಕೊಂಡರು.

    ಮೊಮೊಟಾ ಕಳೆದ ವಾರ ತಮ್ಮ ತವರು ಕ್ರೀಡಾಂಗಣದಲ್ಲಿ ಜಪಾನ್ ಓಪನ್ ಪ್ರಶಸ್ತಿ ಬಾಚಿಕೊಂಡಿದ್ದರು. ಆದರೆ ಅವರಿಗೆ ಸತತ ಪ್ರಶಸ್ತಿ ಗೆಲ್ಲಲು ಗಿಂಟಿಂಗ್ ಅವಕಾಶ ನೀಡಲಿಲ್ಲ. 22ರ ಹರೆಯದ ಗಿಂಟಿಂಗ್ ಕಳೆದ ತಿಂಗಳು ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ ಮೊಮೊಟಾಗೆ ಸೋಲುಣಿಸಿದ್ದರು. ವಿಕ್ಟರ್ ಅಕ್ಸೆಲ್‌ಸನ್, ಚೆನ್ ಲಾಂಗ್ ಮತ್ತು ಚೋ ಟಿಯಾನ್ ಚೆನ್ ಅವರಂತಹ ಬಲಿಷ್ಠ ಆಟಗಾರರನ್ನು ಮಣಿಸಿ ಗಿಂಟಿಂಗ್ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಪುರುಷರ ಡಬಲ್ಸ್ ನಲ್ಲಿ ಡೆನ್ಮಾರ್ಕ್‌ನ ಕಿಮ್ ಅಸ್ಟ್ರಾಪ್ ಮತ್ತು ಅ್ಯಂಡ್ರೆಸ್ ಸ್ಕಾರಪ್ ರಸ್ಮುಸೆನ್ ಅವರು ಚೀನಾದ ಹ್ಯಾನ್ ಚೆಂಗ್ಕಾಯ್ ಮತ್ತು ರೆ ಹೋಡಾಂಗ್ ವಿರುದ್ಧ 21-13, 17-21, 21-14 ಅಂತರದಲ್ಲಿ ಜಯ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News