ಕೇರಳಕ್ಕೆ ಮತ್ತೆ ಮಳೆಯ ಭೀತಿ

Update: 2018-09-24 04:54 GMT

 ತಿರುವನಂತಪುರ,ಸೆ.24: ಕಳೆದ ತಿಂಗಳು ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಮತ್ತೆ ಅಪಾಯ ಕಾದಿದೆ. ಸೆ.25ರಂದು ಪಟ್ಟಣಂತಿಟ್ಟ, ಇಡುಕ್ಕಿ, ವಯನಾಡು ಮತ್ತು ತ್ರಿಶೂರ್‌ನಲ್ಲಿ ಸೆ.25 ಮತ್ತು 26ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆಯ ನೀಡಿರುವ ಸೂಚನೆಯಂತೆ ಈ ನಾಲ್ಕು ಜಿಲ್ಲೆಗಳಲ್ಲಿ 64.4 ಮಿ.ಮೀ ನಿಂದ 124 ಮಿ.ಮೀ ತನಕ ಮಳೆಯಾಗುವ ಸಾಧ್ಯತೆ ಇದೆ.

 ಪರಿಸ್ಥಿತಿಯನ್ನು ನಿಭಾಯಿಸಲು ತಯಾರಾಗಿರುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆಯಾ ಜಿಲ್ಲಾಡಳಿತ ಕಚೇರಿಗಳಿಗೆ ಸೂಚನೆ ನೀಡಿದೆ ಎಂದು ಮುಖ್ಯ ಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಕೇರಳದಲ್ಲಿ ಮಳೆಯು 350 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಲಕ್ಷಾಂತರ ಮಂದಿ ಮನೆ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News