ಇಸ್ರೇಲ್ ಪೈಲಟ್‌ಗಳ ದಾರಿತಪ್ಪಿಸುವ ಮಾಹಿತಿ ವಿಮಾನ ಪತನಕ್ಕೆ ಕಾರಣ: ರಶ್ಯ

Update: 2018-09-24 17:25 GMT

ಮಾಸ್ಕೊ, ಸೆ. 24: ಸಿರಿಯದಲ್ಲಿ ಕಳೆದ ವಾರ ನಮ್ಮ ಯುದ್ಧ ವಿಮಾನವೊಂದು ಪತನಗೊಳ್ಳಲು ಇಸ್ರೇಲ್ ವಾಯುಪಡೆಯ ‘ದಾರಿತಪ್ಪಿಸುವ’ ಮಾಹಿತಿಯೇ ಕಾರಣ ಎಂದು ರಶ್ಯ ಸೇನೆ ರವಿವಾರ ಆರೋಪಿಸಿದೆ ಹಾಗೂ ಇಸ್ರೇಲಿ ಪೈಲಟ್‌ಗಳ ‘ಸಾಹಸ’ವನ್ನು ಖಂಡಿಸಿದೆ.

ಆದರೆ, ಈ ಹೇಳಿಕೆಗೆ ಪ್ರಬಲ ಅಸಮ್ಮತಿ ವ್ಯಕ್ತಪಡಿಸಿರುವ ಇಸ್ರೇಲ್, ಸಿರಿಯದಲ್ಲಿರುವ ಇರಾನ್‌ನ ಗುರಿಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸುವುದಾಗಿ ಹೇಳಿದೆ.

ಸಿರಿಯದ ವಾಯು ರಕ್ಷಣಾ ಕ್ಷಿಪಣಿಯೊಂದು ಸೆಪ್ಟಂಬರ್ 17ರಂದು ರಶ್ಯದ ಇಲ್ಯೂಶಿನ್ ಐಎಲ್-20 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಅದರಲ್ಲಿದ್ದ ಎಲ್ಲ 15 ರಶ್ಯ ಸೈನಿಕರು ಮೃತಪಟ್ಟಿದ್ದಾರೆ.

ಇಸ್ರೇಲ್ ಪೈಲಟ್‌ಗಳು ದೊಡ್ಡ ಇಲ್ಯೂಶಿನ್ ವಿಮಾನವನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ, ಇದರಿಂದಾಗಿ ಸಿರಿಯದ ಎಸ್-200 ವಾಯು ರಕ್ಷಣಾ ವ್ಯವಸ್ಥೆಯು ರಶ್ಯದ ವಿಮಾನವನ್ನು ಗುರಿಯೆಂಬಂತೆ ಪರಿಗಣಿಸಿತು ಎಂದು ರಶ್ಯ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News