ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಹೆಸರು ಸೂಚಿಸಿದ ಬಿಜೆಪಿ ನಾಯಕಿ

Update: 2018-09-24 18:20 GMT

ಚೆನೈ, ಸೆ.24: ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ರಕ್ಷಣೆ ಕಾರ್ಯಕ್ರಮ ‘ಆಯುಷ್ಮಾನ್ ಭಾರತ’ವನ್ನು ಆರಂಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು 2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿರುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಅವರು ಸೋಮವಾರ ಇಲ್ಲಿ ತಿಳಿಸಿದರು.

ಖಾಸಗಿ ವಿವಿಯಲ್ಲಿ ಪ್ರೊಫೆಸರ್ ಆಗಿರುವ ಅವರ ಪತಿ ಡಾ.ಪಿ.ಸೌಂದರರಾಜನ್ ಅವರೂ ನೊಬೆಲ್ ಪುರಸ್ಕಾರಕ್ಕಾಗಿ ಮೋದಿಯವರ ಹೆಸರನ್ನು ಸೂಚಿಸಿದ್ದಾರೆ ಎಂದು ತಮಿಳಿಸೈ ಅವರ ಕಚೇರಿಯ ಹೇಳಿಕೆಯು ತಿಳಿಸಿದೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರನ್ನು ಸೂಚಿಸಲು 2019,ಜ.31 ಕೊನೆಯ ದಿನಾಂಕವಾಗಿದೆ. ನಾಮಕರಣ ಪ್ರಕ್ರಿಯೆ ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳುತ್ತದೆ. ಇತರರೊಡನೆ ಸಂಸತ್ ಸದಸ್ಯರು ಮತ್ತು ವಿವಿಗಳ ಪ್ರೊಫೆಸರ್‌ಗಳೂ ನಮ್ಮ ಪ್ರಧಾನಿಯವರ ಹೆಸರನ್ನು ಸೂಚಿಸಬಹುದು ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News