ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

Update: 2018-09-26 06:54 GMT

ಹೊಸದಿಲ್ಲಿ, ಸೆ.26: ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ ಎಂದಿದೆ.

ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ಕೋರ್ಟ್ ರದ್ದುಗೊಳಿಸಿದ್ದು, ಖಾಸಗಿ ಕಂಪೆನಿಗಳು ಆಧಾರ್ ಕಾರ್ಡನ್ನು ಕೇಳುವಂತಿಲ್ಲ ಎಂದಿದೆ. ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಪಾನ್ ಲಿಂಕಿಂಗ್ ಗೆ ಆಧಾರ್ ಕಡ್ಡಾಯ ಎಂದಿದೆ.

ಅದೇ ರೀತಿ ಯುಜಿಸಿ, ನೀಟ್, ಸಿಬಿಎಸ್ ಇ ಪರೀಕ್ಷೆಗಳಿಗೂ ಆಧಾರ್  ಕಡ್ಡಾಯವಲ್ಲ. ಕೋರ್ಟ್ ನ ಅನುಮತಿ ಪಡೆಯದೆ ಬಯೋಮೆಟ್ರಿಕ್ ಡಾಟಾವನ್ನು ಯಾವುದೇ ಏಜೆನ್ಸಿಯೊಂದಿಗೆ ಹಂಚಿಕೊಳ್ಳಬಾರದು ಎಂದಿದೆ. ಯಾವುದೇ ಮೊಬೈಲ್ ಕಂಪೆನಿಯೂ ಆಧಾರ್ ಕಾರ್ಡನ್ನು ಗ್ರಾಹಕರಿಂದ ಕೇಳಬಾರದು ಎಂದು ಕೋರ್ಟ್ ಹೇಳಿದೆ.

ಅದೇ ರೀತಿ ಶಾಲಾ ಪ್ರವೇಶಕ್ಕೂ ಆಧಾರ್ ಕಡ್ಡಾಯವಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News