×
Ad

ಚುನಾವಣಾ ಅನಿವಾರ್ಯತೆಗಳು ಭಾರತದ ವರ್ತನೆಗೆ ಕಾರಣ: ಪಾಕ್ ವಿದೇಶ ಸಚಿವ ಕುರೇಶಿ

Update: 2018-09-29 22:28 IST

ನ್ಯೂಯಾರ್ಕ್, ಸೆ. 29: ಪಾಕಿಸ್ತಾನದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರಕಾರದ ಜೊತೆ ಮಾತುಕತೆ ನಡೆಸಲು ಭಾರತ ತೋರಿಸುತ್ತಿರುವ ಅನಾಸಕ್ತಿಗೆ ಆ ದೇಶದ ಆಂತರಿಕ ರಾಜಕೀಯ ಮತ್ತು ಚುನಾವಣಾ ಅನಿವಾರ್ಯತೆಗಳು ಕಾರಣ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಆರೋಪಿಸಿದ್ದಾರೆ.

ಕುರೇಶಿ ಮತ್ತು ವಿದೇಶ ಸಚಿವೆ ಸುಶ್ಮಾ ಸ್ವರಾಜ್ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ಮಾತುಕತೆ ನಡೆಸುವ ಪ್ರಸ್ತಾಪವಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪೊಲೀಸರ ಹತ್ಯೆಯ ಬಳಿಕ ಭಾರತ ಈ ಮಾತುಕತೆಯನ್ನು ರದ್ದುಪಡಿಸಿದೆ.

‘‘ಅವರು ಯಾಕೆ ನಿರಾಸಕ್ತಿ ಹೊಂದಿದ್ದಾರೆ? ಸರಳವಾಗಿ ಹೇಳುವುದಾದರೆ, ರಾಜಕೀಯ ಮತ್ತು ಚುನಾವಣೆ. ಅವರು ಮತದಾರರ ಬಗ್ಗೆ ಭೀತಿ ಹೊಂದಿದ್ದಾರೆ. ಅವರು ಅತ್ಯಂತ ತೀವ್ರ ರೀತಿಯಲ್ಲಿ ಭಾವನೆಗಳನ್ನು ರೂಪಿಸಿದ್ದಾರೆ. ಈಗ ಅದರಿಂದ ಹಿಂದೆ ಬರಲು ಅವರಿಗೆ ಕಷ್ಟವಾಗುತ್ತಿದೆ. ಚುನಾವಣೆ ಹತ್ತಿರದಲ್ಲಿರುವಾಗ ಹೀಗೆ ಮಾಡುವುದು ತಿರುಗುಬಾಣವಾಗಬಹುದು ಎಂಬ ಭೀತಿಯನ್ನು ಅವರು (ಭಾರತ ಸರಕಾರ) ಹೊಂದಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಏಶ್ಯ ಸೊಸೈಟಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News