ಗತವೈಭವ ಮತ್ತೆ ಗಳಿಸಲು ನವೀಕರಣಗೊಳ್ಳುತ್ತಿದೆ ಐತಿಹಾಸಿಕ ಮಕ್ಕಾ ಮಸೀದಿ

Update: 2018-09-29 18:32 GMT

ಒಂದೇ ಗ್ರಾನೈಟ್ ಶಿಲೆಯಿಂದ ಸೃಷ್ಟಿಸಲಾದ ಎರಡು ಅಷ್ಟಭುಜಾಕಾರದ ಸ್ತಂಭಗಳನ್ನು ಮಸೀದಿಯು ಹೊಂದಿದ್ದು, ಮೇಲೆ ಕಮಾನು ರೂಪದ ಗ್ಯಾಲರಿಯಿದ್ದು, ತುದಿಯಲ್ಲಿ ಗುಮ್ಮಟವಿದೆ. ಈ ಮಸೀದಿಯಲ್ಲಿ ಏಕಕಾಲಕ್ಕೆ 10,000 ಜನರು ಪ್ರಾರ್ಥನೆಗಳನ್ನು ಸಲ್ಲಿಸಬಹುದಾಗಿದೆ. ಮಸೀದಿಯ ನಿರ್ಮಾಣದಲ್ಲಿ ಬಳಸಲಾಗಿರುವ ಇಟ್ಟಿಗೆಗಳನ್ನೂ ಮಕ್ಕಾದಿಂದ ತರಲಾಗಿತ್ತು ಎನ್ನಲಾಗಿದೆ.

ಭಾರತದ ಐತಿಹಾಸಿಕ ನಗರ ಹೈದರಾಬಾದ್‌ನಲ್ಲಿರುವ, ಸೌದಿ ಅರೇಬಿಯಾದ ಮಕ್ಕಾದಿಂದ ತರಿಸಲಾಗಿದ್ದ ಗ್ರಾನೈಟ್‌ಗಳು ಮತ್ತು ಇಟ್ಟಿಗೆಗಳಿಂದ ನಿರ್ಮಾಣಗೊಂಡಿರುವ 17ನೇ ಶತಮಾನದ ಮಕ್ಕಾ ಮಸೀದಿಯ ಹಿಂದಿನ ವೈಭವವನ್ನು ಮರುಸ್ಥಾಪಿಸಲು ನವೀಕರಣ ಕಾರ್ಯ ನಡೆಯುತ್ತಿದೆ.

ನಗರದ ಪ್ರಮುಖ ಹೆಗ್ಗುರುತಾಗಿರುವ ಚಾರ್ ಮಿನಾರ್‌ನಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಮಕ್ಕಾ ಮಸೀದಿಯಿದ್ದು, ಅದರ ಅದ್ಭುತ ಕಟ್ಟಡವನ್ನು ಸಂರಕ್ಷಿಸಲು ನವೀಕರಣ ಕಾರ್ಯ ಭರದಿಂದ ನಡೆಯುತ್ತಿದೆ. ಮಸೀದಿಯ ಒಳಭಾಗದಲ್ಲಿ ಎತ್ತರದಲ್ಲಿ ತೂಗಾಡುತ್ತಿರುವ ಶಾಂಡೆಲಿಯರ್ ಅಥವಾ ಗೊಂಚಲು ತೂಗುದೀಪಗಳನ್ನು ಬಟ್ಟೆಗಳಿಂದ ಮುಚ್ಚಲಾಗಿದ್ದು, ಎತ್ತರದ ಮಿನಾರುಗಳನ್ನು ಅಟ್ಟಣೆಗಳು ಆವರಿಸಿಕೊಂಡಿವೆ.


ಭಾರತೀಯ ಪುರಾತತ್ತ್ವ ಸರ್ವೇಕ್ಷಣೆ(ಎಎಸ್‌ಐ)ಯು ಒಂದು ವರ್ಷದ ಹಿಂದೆಯೇ ನವೀಕರಣ ಕಾಮಗಾರಿಯನ್ನು ಆರಂಭಿಸಿದ್ದು, ಪೂರ್ಣಗೊಳ್ಳಲು ಇನ್ನೂ ಕೆಲ ಸಮಯಾವಕಾಶ ಬೇಕಾಗಬಹುದು. ಎಎಸ್‌ಐ 1956ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ವಿಶೇಷ ವ್ಯವಸ್ಥೆಯಡಿ ಈ ಹಿಂದೆ 2007ರಲ್ಲಿ ಮಕ್ಕಾ ಮಸೀದಿಯ ಸಂರಕ್ಷಣೆಗೆ ಕೆಲವು ಕಾಮಗಾರಿಗಳನ್ನು ನಡೆಸಿತ್ತು.
ತೆಲಂಗಾಣ ಪ್ರವಾಸೋದ್ಯಮ ಇಲಾಖೆಯ ಮಾಹಿತಿಯಂತೆ ಸುಲ್ತಾನ್ ಮುಹಮ್ಮದ್ ಕುತುಬ್ ಶಾ 1614ರಲ್ಲಿ ಮಕ್ಕಾ ಮಸೀದಿಯ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಔರಂಗಜೇಬ್ 1693ರಲ್ಲಿ ಅದನ್ನು ಪೂರ್ಣಗೊಳಿಸಿದ್ದ. 225 ಅಡಿ ಉದ್ದ ಮತ್ತು 180 ಅಡಿ ಅಗಲವಿರುವ ಮಸೀದಿಯು 75 ಅಡಿ ಎತ್ತರವಿದೆ. ಮಸೀದಿಯ ಛಾವಣಿಯು 15 ಕಮಾನುಗಳನ್ನು ಆಧರಿಸಿದೆ.
ಒಂದೇ ಗ್ರಾನೈಟ್ ಶಿಲೆಯಿಂದ ಸೃಷ್ಟಿಸಲಾದ ಎರಡು ಅಷ್ಟಭುಜಾಕಾರದ ಸ್ತಂಭಗಳನ್ನು ಮಸೀದಿಯು ಹೊಂದಿದ್ದು, ಮೇಲೆ ಕಮಾನು ರೂಪದ ಗ್ಯಾಲರಿಯಿದ್ದು, ತುದಿಯಲ್ಲಿ ಗುಮ್ಮಟವಿದೆ. ಈ ಮಸೀದಿಯಲ್ಲಿ ಏಕಕಾಲಕ್ಕೆ 10,000 ಜನರು ಪ್ರಾರ್ಥನೆಗಳನ್ನು ಸಲ್ಲಿಸಬಹುದಾಗಿದೆ. ಮಸೀದಿಯ ನಿರ್ಮಾಣದಲ್ಲಿ ಬಳಸಲಾಗಿರುವ ಇಟ್ಟಿಗೆಗಳನ್ನೂ ಮಕ್ಕಾದಿಂದ ತರಲಾಗಿತ್ತು ಎನ್ನಲಾಗಿದೆ.


ಕುತುಬ್ ಶಾಹಿ ಅರಸೊತ್ತಿಗೆಯ ಐದನೇ ಸುಲ್ತಾನ್‌ನಾಗಿದ್ದ ಮುಹಮ್ಮದ್ ಕುಲಿ ಖುತುಬ್ ಶಾ ಕಲೆ ಮತ್ತು ಸಂಸ್ಕೃತಿಯ ಮಹಾನ್ ಪೋಷಕನಾಗಿದ್ದ ಎನ್ನಲಾಗಿದೆ.
17ನೇ ಶತಮಾನದ ಖ್ಯಾತ ಫ್ರೆಂಚ್ ಪ್ರವಾಸಿ ಜೀನ್-ಬಾಪ್ಟಿಸ್ಟ್ ಟಾವೆರ್ನಿಯರ್ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಮಕ್ಕಾ ಮಸೀದಿ ನಿರ್ಮಾಣ ಹಂತದಲ್ಲಿತ್ತು.
‘‘ಅವರು ಕಳೆದ 50 ವರ್ಷಗಳಿಂದಲೂ ನಗರದಲ್ಲಿ ಅದ್ಭುತ ‘ಪಗೋಡಾ’ವೊಂದನ್ನು ನಿರ್ಮಿಸುತ್ತಿದ್ದಾರೆ. ಅದು ಪೂರ್ಣಗೊಂಡಾಗ ಇಡೀ ಭಾರತದಲ್ಲಿ ಅದ್ಭುತ ಕಟ್ಟಡವಾಗಲಿದೆ’ ಎಂದಾತ ಬರೆದಿದ್ದ.
ಸ್ವತಃ ಕುತುಬ್ ಶಾ ಮಸೀದಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದ್ದು, ನಿರ್ಮಾಣ ಕಾರ್ಯದಲ್ಲಿ ಕನಿಷ್ಠ 8,000 ಕಾರ್ಮಿಕರು ಭಾಗಿಯಾ ಗಿದ್ದರು. ಮೂರು ಕಮಾನು ರೂಪದ ಅಗ್ರಭಾಗಗಳನ್ನು ಒಂದೇ ಗ್ರಾನೈಟ್ ಶಿಲೆಯಿಂದ ನಿರ್ಮಿಸಲಾಗಿದ್ದು, ಈ ಶಿಲೆಯನ್ನು ಗಣಿಯಿಂದ ತೆಗೆಯಲು ಬರೋಬ್ಬರಿ ಐದು ವರ್ಷಗಳು ಹಿಡಿದಿದ್ದವು.
ಪ್ರತಿವರ್ಷ ರಮಝಾನ್ ಆರಂಭಕ್ಕೆ ಮುನ್ನ ಮಸೀದಿಯನ್ನು ಸುಂದರಗೊಳಿಸಲು ಅಧಿಕಾರಿಗಳು ವಾರ್ಷಿಕ ನಿರ್ವಹಣೆ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ಆದರೆ ಈಗ ನಡೆಯುತ್ತಿರುವ ಕಾಮಗಾರಿ ಬೃಹತ್ ಸ್ವರೂಪದ್ದಾಗಿದ್ದು, ಮಸೀದಿಗೆ ಹೆಚ್ಚಿನ ಸೌಂದರ್ಯವನ್ನು ನೀಡುವ ನಿರೀಕ್ಷೆಯಿದೆ.
ಮಸೀದಿಯ ನವೀಕರಣ ಕಾರ್ಯ ಶೀಘ್ರವೇ ಪೂರ್ಣಗೊಳ್ಳುತ್ತದೆ ಎಂದು ಹೈದರಾಬಾದ್‌ನ ಜನರು ಆಶಿಸಿದ್ದಾರೆ.
ಕೃಪೆ: english.alarabiya.net

Writer - ಅಫ್ತಾಬ್ ಹುಸೈನ್ ಕೋಲಾ

contributor

Editor - ಅಫ್ತಾಬ್ ಹುಸೈನ್ ಕೋಲಾ

contributor

Similar News

ಜಗದಗಲ
ಜಗ ದಗಲ