ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ 90.84, ದಿಲ್ಲಿಯಲ್ಲಿ 83.49 ರೂ.

Update: 2018-09-30 09:52 GMT

ಹೊಸದಿಲ್ಲಿ, ಸೆ.30: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೊಮ್ಮೆ ಹೆಚ್ಚಳಗೊಂಡಿದ್ದು, ದಿಲ್ಲಿಯಲ್ಲಿ, ಕೊಲ್ಕತ್ತಾ ಮತ್ತು ಮುಂಬೈಯಲ್ಲಿ 0.09 ಪೈಸೆಯಷ್ಟು ಏರಿಕೆಯಾಗಿದೆ. ಚೆನ್ನೈಯಲ್ಲಿ 0.10 ಪೈಸೆ ಬೆಲೆ ಹೆಚ್ಚಳಗೊಂಡಿದೆ.

ಬೆಲೆಯೇರಿಕೆ ನಂತರ ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್ ಒಂದರ ದರ 83.49 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರೊಂದಕ್ಕೆ 74.79 ರೂ. ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಒಂದಕ್ಕೆ 90.84 ರೂ. ಆಗಿದ್ದರೆ, ಡೀಸೆಲ್ ಬೆಲೆ 79.40 ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News