ನೀರವ್ ಮೋದಿಗೆ ಸೇರಿದ 637 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ

Update: 2018-10-01 06:13 GMT

ಮುಂಬೈ, ಅ.1: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿಗೆ ಸೇರಿದ  637 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ

ನೀರವ್ ಮೋದಿಗೆ ಸೇರಿರುವ ಭಾರತ ಸೇರಿದಂತೆ 5 ದೇಶಗಳಲ್ಲಿರುವ ಆಸ್ತಿಯನ್ನು ಜಪ್ತಿ ಮಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ವಿದೇಶದಲ್ಲಿರುವ ವಿವಿಧ ಬ್ಯಾಂಕ್ ಖಾತೆ, ಆಸ್ತಿಪಾಸ್ತಿಯನ್ನು  ಮುಟ್ಟುಗೋಲು ಹಾಕಿದ್ದಾರೆ.   

ನೀರವ್ ಮೋದಿಗೆ ಸೇರಿದ ನ್ಯೂಯಾರ್ಕ್ ನಲ್ಲಿರುವ 216 ಕೋಟಿ ರೂ. ಮೌಲ್ಯದ ಎರಡು ಸ್ಥಿರ ಆಸ್ತಿಗಳನ್ನು  ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ,

5 ವಿದೇಶಿ ಬ್ಯಾಂಕ್ ಖಾತೆಗಳಲ್ಲಿರುವ 278 ಕೋಟಿ ರೂ. , ದಕ್ಷಿಣ ಮುಂಬೈನಲ್ಲಿರುವ 19.50 ಕೋಟಿ ಮೌಲ್ಯದ ಫ್ಲ್ಯಾಟ್  ಜಪ್ತಿ ಮಾಡಲಾಗಿದೆ. ನೀರವ್ ಮೋದಿಯ  ಹಾಂಕಾಂಗ್ ನಲ್ಲಿದ 22.69 ಕೋಟಿ ರೂ. ವಜ್ರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.

   

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News