ಪ್ರಧಾನಿ ಮೋದಿಯ ಕಾರ್ಯಕ್ರಮ ಬಹಿಷ್ಕರಿಸಿದ ಆರು ಅಮುಲ್ ನಿರ್ದೇಶಕರು

Update: 2018-10-01 11:03 GMT

ಹೊಸದಿಲ್ಲಿ, ಅ.1: ಉಪಾಧ್ಯಕ್ಷ ರಾಜೇಂದ್ರಸಿನ್ಹ್ ಪಾರ್ಮರ್ ಸೇರಿದಂತೆ ಅಮುಲ್ ಡೈರಿಯ 6 ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.

ಗುಜರಾತ್ ನ ಆನಂದ್ ಜಿಲ್ಲೆಯ ಮೋಗರ್ ಎಂಬಲ್ಲಿ ಪ್ರಧಾನಿ ಮೋದಿ ಚಾಕೊಲೇಟ್ ಘಟಕವೊಂದನ್ನು ಉದ್ಘಾಟಿಸಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು.

“ಧೀರೂಭಾಯ್ ಚಾವ್ಡಾ, ಜುವಸಿನ್ಹ ಚೌಹಾಣ್, ರಾಜುಸಿನ್ಹ್ ಪಾರ್ಮರ್, ನೀತಾ ಬೆನ್ ಸೋಲಂಕಿ, ಚಂದುಭಾಯ್ ಪಾರ್ಮರ್ ಸೇರಿದಂತೆ ನಾನೂ ಕೂಡ ಕಾರ್ಯಕ್ರಮಕ್ಕೆ ಹೋಗಿಲ್ಲ. ಪ್ರಧಾನಿ ಮೋದಿಯವರ ಭೇಟಿಗೆ ನನ್ನದೇನೂ ಆಕ್ಷೇಪವಿಲ್ಲ ಎಂದು ನಾನು ಚೇರ್ ಮೆನ್ ಗೆ ತಿಳಿಸಿದ್ದೇನೆ. ಆದರೆ ಅದು ರಾಜಕೀಯ ಕಾರ್ಯಕ್ರಮವಾಗಬಾರದು. ಕಾರ್ಯಕ್ರಮದಿಂದ ಅಮುಲ್ ಗೆ ಏನೂ ದಕ್ಕಿಲ್ಲ” ಎಂದು ಕಾಂಗ್ರೆಸ್ ಶಾಸಕರೂ ಆಗಿರುವ ರಾಜೇಂದ್ರ ಸಿನ್ಹ ತಿಳಿಸಿದರು.

ಅಮುಲ್ ಡೈರಿ ಮಂಡಳಿಯ 17 ಸದಸ್ಯರಲ್ಲಿ ರಾಜೇಂದ್ರಸಿನ್ಹ ಕೂಡ ಒಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News