ರೊಹಿಂಗ್ಯಾರನ್ನು ದ್ವೀಪಕ್ಕೆ ಸ್ಥಳಾಂತರಿಸುವ ಬಾಂಗ್ಲಾ ಯೋಜನೆ ಮುಂದೂಡಿಕೆ

Update: 2018-10-01 17:08 GMT

ಢಾಕಾ (ಬಾಂಗ್ಲಾದೇಶ), ಅ. 1: ರೊಹಿಂಗ್ಯಾ ಮುಸ್ಲಿಮರನ್ನು ದೂರದ ದ್ವೀಪವೊಂದಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಬಾಂಗ್ಲಾದೇಶ ಮುಂದೂಡಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ದ್ವೀಪಕ್ಕೆ ಸ್ಥಳಾಂತರಿಸುವ ಯೋಜನೆಗೆ ರೊಹಿಂಗ್ಯಾ ನಿರಾಶ್ರಿತರಿಂದ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಸ್ಮರಿಸಬಹುದಾಗಿದೆ.

ಭಶನ್ ಚಾರ್ ದ್ವೀಪದಲ್ಲಿ ಒಂದು ಲಕ್ಷ ನಿರಾಶ್ರಿತರಿಗಾಗಿ ಕಾಲನಿಯೊಂದನ್ನು ನಿರ್ಮಿಸಲಾಗಿತ್ತು.

ಈ ಹೂಳುಭರಿತ ದ್ವೀಪವು ಪ್ರಾಕೃತಿಕ ವಿಕೋಪಗಳಿಗೆ ಬೇಗ ತುತ್ತಾಗುತ್ತದೆ ಎಂಬ ಎಚ್ಚರಿಕೆಯ ಹೊರತಾಗಿಯೂ ಬಾಂಗ್ಲಾದೇಶ ತನ್ನ ಯೋಜನೆಯನ್ನು ಮುಂದುವರಿಸಿತ್ತು.

ಪ್ರಧಾನಿ ಶೇಖ್ ಹಸೀನಾ ಬುಧವಾರ ಈ ಕಾಲನಿಯನ್ನು ಉದ್ಘಾಟಿಸುವ ಕಾರ್ಯಕ್ರಮವೂ ನಿಗದಿಯಾಗಿತ್ತು.

ಕೆಸರಿನಿಂದ ಕೂಡಿದ ಈ ಸಣ್ಣ ದ್ವೀಪವನ್ನು ವಾಸಯೋಗ್ಯವಾಗಿಸಲು ಬಾಂಗ್ಲಾದೇಶ ಸರಕಾರವು 280 ಮಿಲಿಯ ಡಾಲರ್ (ಸುಮಾರು 2040 ಕೋಟಿ ರೂಪಾಯಿ) ಖರ್ಚು ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಈ ದ್ವೀಪ ಕಾಲನಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಬಾಂಗ್ಲಾದೇಶದ ಸಶಸ್ತ್ರ ಪಡೆಗಳ ವಕ್ತಾರರೊಬ್ಬರು ಹೇಳಿದ್ದಾರೆ.

ದ್ವೀಪದಲ್ಲಿ ಜನವಾಸ್ತವ್ಯ ಕಾಲನಿ ನಿರ್ಮಾಣದ ಹೊಣೆಯನ್ನು ಬಾಂಗ್ಲಾದೇಶದ ಸೇನೆ ವಹಿಸಿಕೊಂಡಿದೆ.

‘‘ನಾವು ಶೀಘ್ರವೇ ನೂತನ ದಿನಾಂಕವನ್ನು ಪ್ರಕಟಿಸುತ್ತೇವೆ’’ ಎಂದು ಲೆಫ್ಟಿನೆಂಟ್ ಕರ್ನಲ್ ಅಲಂಗೀರ್ ಕಬೀರ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News