ಟ್ರಂಪ್ ಆಡಳಿತದಲ್ಲಿ ಅಮೆರಿಕದ ಪ್ರತಿಷ್ಠೆ ಕುಸಿತ: ಸಮೀಕ್ಷೆ

Update: 2018-10-02 16:42 GMT

 ಬರ್ಲಿನ್, ಅ. 2: ಕೆನಡ ಮತ್ತು ಜರ್ಮನಿ ಮುಂತಾದ ಮಿತ್ರ ದೇಶಗಳ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರ ವಾಗ್ದಾಳಿ ನಡೆಸಿದ ಒಂದು ವರ್ಷದ ಬಳಿಕ, ಸಾಂಪ್ರದಾಯಿಕ ಮಿತ್ರದೇಶಗಳ ನಡುವೆ ಅಮೆರಿಕದ ಪ್ರತಿಷ್ಠೆ ಇನ್ನಷ್ಟು ಕುಸಿದಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಈ ಸಂಬಂಧ 'ಪ್ಯೂ ಸಂಶೋಧನಾ ಕೇಂದ್ರ'ವು 25 ದೇಶಗಳ ಸಮೀಕ್ಷೆ ನಡೆಸಿದೆ.

ಟ್ರಂಪ್‌ರ ನಾಯಕತ್ವದ ಬಗ್ಗೆ ದೇಶಗಳು ಕಡಿಮೆ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಬದಲಿಗೆ, ರಶ್ಯದ ವ್ಲಾದಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್‌ರ ನಾಯಕತ್ವದಲ್ಲಿ ಹೆಚ್ಚಿನ ವಿಶ್ವಾಸವನ್ನು ಈ ದೇಶಗಳು ಹೊಂದಿವೆ.

2017 ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂದಿನಿಂದ, ಅಮೆರಿಕವು ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ಇರಾನ್ ಪರಮಾಣು ಒಪ್ಪಂದಗಳಂಥ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಹಿಂದೆ ಸರಿದಿರುವುದನ್ನು ಸ್ಮರಿಸಬಹುದಾಗಿದೆ.

ಪುಟಿನ್ ಮತ್ತು ಉತ್ತರ ಕೊರಿಯದ ಕಿಮ್ ಜಾಂಗ್ ಉನ್‌ರಂಥ ಸರ್ವಾಧಿಕಾರಿ ಪ್ರವೃತ್ತಿಯ ನಾಯಕರಿಗೆ ನಿಕಟವಾಗುತ್ತಿದ್ದಾರೆ. ಆದರೆ, ತನ್ನ ನೆರೆಯ ದೇಶಗಳು ಮತ್ತು ನ್ಯಾಟೊ ಮಿತ್ರರನ್ನು ಟೀಕಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News