ಅಫ್ಘಾನ್ ನಲ್ಲಿ ಆತ್ಮಹತ್ಯಾ ಸ್ಫೋಟ; 13 ಸಾವು

Update: 2018-10-02 16:44 GMT

ಜಲಾಲಾಬಾದ್ (ಅಫ್ಘಾನಿಸ್ತಾನ), ಅ. 2: ಅಫ್ಘಾನಿಸ್ತಾನದ ಚುನಾವಣಾ ಪ್ರಚಾರ ಸಭೆಯೊಂದರ ಮೇಲೆ ಮಂಗಳವಾರ ನಡೆದ ಆತ್ಮಹತ್ಯಾ ದಾಳಿಯೊಂದರಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಂಗರ್‌ಹಾರ್ ಪ್ರಾಂತದ ಕಮ ಜಿಲ್ಲೆಯಲ್ಲಿ ಚುನಾವಣಾ ಅಭ್ಯರ್ಥಿಯೊಬ್ಬರ ಬೆಂಬಲಿಗರನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸಂಸದೀಯ ಚುನಾವಣಾ ಪ್ರಚಾರ ಶುಕ್ರವಾರ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News