ಹೆತ್ತವರ ಬೃಹತ್ ತೆರಿಗೆ ವಂಚನೆಯಲ್ಲಿ ಟ್ರಂಪ್ ಶಾಮೀಲು: ‘ನ್ಯೂಯಾರ್ಕ್ ಟೈಮ್ಸ್’ ವರದಿ

Update: 2018-10-03 16:03 GMT

ವಾಶಿಂಗ್ಟನ್, ಅ. 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆತ್ತವರು ಲಕ್ಷಾಂತರ ಡಾಲರ್ ತೆರಿಗೆ ವಂಚಿಸಲು ಸಹಾಯ ಮಾಡಿದ್ದಾರೆ ಹಾಗೂ ಅವರು ಹೆತ್ತವರಿಂದ ಈ ಹಿಂದೆ ಹೇಳಿಕೊಂಡಿರುವುದಕ್ಕಿಂತ ತುಂಬಾ ಹೆಚ್ಚು ಹಣವನ್ನು ಸ್ವೀಕರಿಸಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.

‘‘1990ರ ದಶಕದಲ್ಲಿ ನಡೆದ ತೆರಿಗೆ ವಂಚನೆಗಳಲ್ಲಿ ಟ್ರಂಪ್ ಪಾಲ್ಗೊಂಡಿದ್ದರು. ಇದರಲ್ಲಿ ನೇರಾನೇರ ವಂಚನೆಗಳೂ ಸೇರಿವೆ. ಇದರಿಂದಾಗಿ ಅವರು ಹೆತ್ತವರಿಂದ ಪಡೆದುಕೊಂಡ ಸಂಪತ್ತಿನಲ್ಲಿ ಭಾರೀ ಏರಿಕೆಯಾಯಿತು’’ ಎಂದು ಪತ್ರಿಕೆ ಹೇಳಿದೆ.

ನನ್ನ ತಂದೆ, ನ್ಯೂಯಾರ್ಕ್ ಕಟ್ಟಡ ನಿರ್ಮಾಣಕಾರ ಫ್ರೆಡ್ ಟ್ರಂಪ್‌ರಿಂದ ನಾನು ಏನೂ ಸಹಾಯ ಪಡೆದುಕೊಂಡಿಲ್ಲ ಎಂಬುದಾಗಿ ಟ್ರಂಪ್ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.

ಆದರೆ, ಟ್ರಂಪ್ ಸಲ್ಲಿಸಿದ ತೆರಿಗೆ ವಿವರಗಳ ಬೃಹತ್ ಭಂಡಾರದ ತನಿಖೆ ಮತ್ತು ಗೌಪ್ಯ ದಾಖಲೆಗಳ ಪರಿಶೀಲನೆಯಲ್ಲಿ ಅವರ ಈ ಹೇಳಿಕೆ ತಪ್ಪೆಂದು ಸಾಬೀತಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

 ಟ್ರಂಪ್ ಅವರ ತಂದೆಯ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಇಂದಿನ ಲೆಕ್ಕಾಚಾರದ 413 ಮಿಲಿಯ ಡಾಲರ್ (ಸುಮಾರು 3030 ಕೋಟಿ ರೂಪಾಯಿ)ಗೆ ಸಮವಾದ ಸಂಪತ್ತನ್ನು ಗಳಿಸಿದ್ದಾರೆ ಎಂದಿದೆ.

‘‘ಟ್ರಂಪ್ ಮೂರು ವರ್ಷದವರಿದ್ದಾಗ ಅವರ ತಂದೆಯ ರಿಯಲ್ ಎಸ್ಟೇಟ್ ವ್ಯಾಪಾರದಿಂದ ಇಂದಿನ ಲೆಕ್ಕಾಚಾರದ ಪ್ರಕಾರ ವರ್ಷಕ್ಕೆ 2 ಲಕ್ಷ ಡಾಲರ್ (ಸುಮಾರು 1.5 ಕೋಟಿ ರೂಪಾಯಿ) ಪಡೆಯುತ್ತಿದ್ದರು’’ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News