×
Ad

ನಮ್ಮ ಬೆಂಬಲವಿಲ್ಲದೆ ನೀವು ಉಳಿಯುವುದಿಲ್ಲ ಎಂದು ಸೌದಿ ದೊರೆಗೆ ಹೇಳಿದ್ದೆ: ಟ್ರಂಪ್

Update: 2018-10-03 21:35 IST

ವಾಶಿಂಗ್ಟನ್, ಅ. 3: ಅಮೆರಿಕ ಸೇನೆಯ ಬೆಂಬಲವಿಲ್ಲದೆ ನೀವು ಎರಡು ವಾರವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂಬುದಾಗಿ ನಾನು ಸೌದಿ ಅರೇಬಿಯ ದೊರೆ ಸಲ್ಮಾನ್‌ಗೆ ಎಚ್ಚರಿಕೆ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

 ‘‘ನಾವು ಸೌದಿ ಅರೇಬಿಯವನ್ನು ರಕ್ಷಿಸುತ್ತೇವೆ. ಅವರು ಶ್ರೀಮಂತರು ಎಂದು ನೀವು ಹೇಳುತ್ತೀರಾ? ನಾನು ದೊರೆ ಸಲ್ಮಾನ್‌ರನ್ನು ಪ್ರೀತಿಸುತ್ತೇನೆ. ಆದರೆ, ನಾನು ಹೇಳಿದೆ, ‘ದೊರೆಯೇ, ನಾವು ನಿಮ್ಮನ್ನು ರಕ್ಷಿಸುತ್ತಿದ್ದೇವೆ. ನಾವಿಲ್ಲದೆ ನೀವು ಎರಡು ವಾರವೂ ಇರಲಾರಿರಿ. ನಿಮ್ಮ ಸೇನೆಗೆ ನೀವು ಹಣ ಕೊಡಬೇಕು’ ’’ ಎಂದು ಮಿಸಿಸಿಪ್ಪಿ ರಾಜ್ಯದ ಸೌತವನ್‌ನಲ್ಲಿ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

ಟ್ರಂಪ್‌ರ ಈ ಹೇಳಿಕೆಯನ್ನು ರಾಜತಾಂತ್ರಿಕವಲ್ಲದ ಹೇಳಿಕೆ ಎಂಬುದಾಗಿ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News