ಇರಾಕ್‌ನ ಮುಂದಿನ ಅಧ್ಯಕ್ಷರಾಗಿ ಬರ್ಹಮ್ ಸಲೀಹ್ ಆಯ್ಕೆ

Update: 2018-10-03 16:41 GMT

ಬಗ್ದಾದ್, ಅ. 3: ಹಿರಿಯ ಕುರ್ದಿಶ್ ರಾಜಕಾರಣಿ ಬರ್ಹಮ್ ಸಲೀಹ್‌ರನ್ನು ಮಂಗಳವಾರ ಇರಾಕ್‌ನ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಪ್ಯಾಟ್ರಿಯಾಟಿಕ್ ಯೂನಿಯನ್ ಆಫ್ ಕುರ್ದಿಸ್ತಾನ್ (ಪಿಯುಕೆ) ಪಕ್ಷದ ಸಲೀಹ್ ವಿರುದ್ಧ ಕುರ್ದಿಸ್ತಾನ್ ಡೆಮಾಕ್ರಟಿಕ್ ಪಾರ್ಟಿ (ಕೆಡಿಪಿ)ಯ ಹುಸೇನ್ ಸ್ಪರ್ಧಿಸಿದ್ದರು. ಆದರೆ, ಮಂಗಳವಾರ ಸಂಸತ್ತಿನಲ್ಲಿ ನಡೆದ ಎರಡನೇ ಸುತ್ತಿನ ಮತದಾನದ ವೇಳೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.

2005ರಲ್ಲಿ ಶಿಯಾ ಮತ್ತು ಸುನ್ನಿ ರಾಜಕೀಯ ಶಕ್ತಿಗಳೊಂದಿಗೆ ನಡೆದ ಒಪ್ಪಂದದ ಪ್ರಕಾರ, ಅಧ್ಯಕ್ಷರ ಹುದ್ದೆಯನ್ನು ಕುರ್ದ್ ಜನಾಂಗೀಯರಿಗೆ ವಹಿಸಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News