ವಾಟ್ಸ್ ಆ್ಯಪ್ ಗೆ ಸೇರ್ಪಡೆಯಾದ ಎರಡು ಹೊಸ ಫೀಚರ್ ಬಗ್ಗೆ ಗೊತ್ತೇ?

Update: 2018-10-04 14:51 GMT

ಆ್ಯಂಡ್ರಾಯ್ಡ್ ಗಳಿಗೆ ಇರುವ ವಾಟ್ಸ್ ಆ್ಯಪ್ನಲ್ಲಿ ಎರಡು ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಇದೀಗ ಬಳಕೆದಾರರು ಸಂಭಾಷಣೆಯಲ್ಲಿ ಪ್ರತಿಕ್ರಿಯಿಸಲು ಸ್ವೈಪ್ ಮಾಡಬಹುದಾಗಿದೆ ಹಾಗೂ ಆ್ಯಪ್‌ನಿಂದ ಹೊರಹೋಗದೇ ವೀಡಿಯೊ ಲಿಂಕ್‌ಗಳನ್ನು ಕೂಡಾ ಓಪನ್ ಮಾಡಬಹುದಾಗಿದೆ.

ಈ ಎರಡು ಹೊಸ ಫೀಚರ್‌ಗಳು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ. ವಾಟ್ಸ್ಯಾಪ್‌ನ ಬೆಟಾ ಪ್ರೋಗ್ರಾಂ ಎಲ್ಲ ಬಳಕೆದಾರರಿಗೆ ಮುಕ್ತವಾಗಿದ್ದು, ಇದರ ಸದಸ್ಯರಾಗಲು ಈ ಲಿಂಕ್ https://play.google.com/apps/testing/com.whatsapp ಬಳಸಬಹುದಾಗಿದೆ. ವಾಟ್ಸ್ ಆ್ಯಪ್ ಬೆಟಾ ಸದಸ್ಯರಾದಲ್ಲಿ, ಹೊಸ ಫೀಚರ್‌ಗಳು ನಿಮಗೆ ಇತರ ಬಳಕೆದಾರರಿಗಿಂತ ಮೊದಲೇ ಸಿಗುತ್ತದೆ. ನೀವು ಯಾವುದೇ ಕ್ಷಣದಲ್ಲಿ ಬೆಟಾ ಪ್ರೋಗ್ರಾಂನಿಂದ ಹೊರಬಂದು ಸ್ಥಿರ ವಾಟ್ಸ್ ಆ್ಯಪ್ಗೆ ಹಿಂದಿರುಗಲು ಅವಕಾಶವಿರುತ್ತದೆ.

ಹೊಸ ಅವತರಣಿಕೆಯ ಪಿಕ್ಚರ್-ಇನ್-ಪಿಕ್ಚರ್ ವಿಭಾಗದ ಮೂಲಕ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ವೀಡಿಯೊಗಳನ್ನು ಪಡೆಯಬಹುದಾಗಿದೆ. ನೀವು ಯೂಟ್ಯೂಬ್ ಅಥವಾ ಇನ್‌ಸ್ಟಾಗ್ರಾಂ ವೀಡಿಯೊ ಲಿಂಗ್ ಸಂಪರ್ಕಿಸಿದಾಗ, ಚಾಟ್ ವಿಭಾಗದಲ್ಲೇ ಅದು ತೆರೆದುಕೊಳ್ಳುತ್ತದೆ ಹಾಗೂ ಆಯಾ ಆ್ಯಪ್‌ಗೆ ನಿಮ್ಮನ್ನು ನಿರ್ದೇಶಿಸುವುದಿಲ್ಲ. ನೀವು ಪೂರ್ಣಪರದೆಯಲ್ಲಿ ವೀಡಿಯೊ ವೀಕ್ಷಿಸಲು ಅನುವಾಗುವಂತೆ ವೀಡಿಯೊ ಬಾಕ್ಸ್ ವಿಸ್ತರಿಸಲು ಕೂಡಾ ಅವಕಾಶವಿದೆ.

ಕಳೆದ ಆಗಸ್ಟ್‌ನಲ್ಲಿ ಬೆಟಾ ಆ್ಯಪ್‌ನಲ್ಲಿ ವೀಡಿಯೊ ಕರೆಗೆ ಪಿಕ್ಚರ್-ಇನ್-ಪಿಕ್ಚರ್ ಫೀಚರ್ ಆರಂಭಿಸಿತ್ತು. ಐಓಎಸ್‌ನಲ್ಲಿ ಇದು ಕಳೆದ ವರ್ಷದಿಂದಲೇ ಲಭ್ಯವಿದೆ.
ಇನ್ನೊಂದು ಹೊಸದಾಗಿ ಆರಂಭಿಸಿರುವ ಫೀಚರ್, ಚಾಟ್ ರಿಪ್ಲೈ ಮಾಡಲು ಸ್ವೈಪ್ ಮಾಡುವುದು. ಇದರ ಅನ್ವಯ ಬಳಕೆದಾರರು ತಾವು ಸ್ವೀಕರಿಸಿದ ಸಂದೇಶದ ಬಲಪಕ್ಕದಲ್ಲಿ ಸ್ವೈಪ್ ಮಾಡಿದಲ್ಲಿ ರಿಪ್ಲೈ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಇರುವಂತೆ ಸಂದೇಶದ ಮೇಲೆ ದೀರ್ಘಕಾಲ ಒತ್ತಿಹಿಡಿದಲ್ಲಿ ರಿಪ್ಲೈ ಮಾಡುವ ಫೀಚರ್ ಜತೆಗೆ ಹೊಸ ಫೀಚರ್ ಕೂಡಾ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News