×
Ad

ಉಗ್ರ ಸಂಘಟನೆ ಜೈಶ್ ನ ಸ್ಥಾಪಕ ಮಸೂದ್ ಅಝರ್ ನ ಶಿಷ್ಯ ಬಿಜೆಪಿ ಅಭ್ಯರ್ಥಿ

Update: 2018-10-05 21:33 IST

ಶ್ರೀನಗರ,ಅ.5: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಪೌರ ಚುನಾವಣೆಯಲ್ಲಿಮ ಪಾಕಿಸ್ತಾನದಿಂದ ತರಬೇತಿ ಪಡೆದ ಮಾಜಿ ಉಗ್ರನನ್ನು ಬಿಜೆಪಿ ಕಣಕ್ಕಿಳಿಸಿದೆ.

ಕಣಿವೆ ರಾಜ್ಯದಲ್ಲಿ ಮುಂದಿನ ನಗರ ಪಾಲಿಕೆ ಚುನಾವಣೆಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳಲ್ಲಿ ಸುಧಾರಿತ ಉಗ್ರನಾಗಿರುವ ಮುಹಮ್ಮದ್ ಫಾರೂಕ್ ಖಾನ್ ಒಬ್ಬ ಈತ ಜೈಶ್ ಸಂಘಟನೆಯ ಸ್ಥಾಪಕ ಮಸೂದ್ ಅಝರ್ ನ ಶಿಷ್ಯ.

1970ರಲ್ಲಿ ಶ್ರೀನಗರದ ಬರ್ಬರ್‌ಶಹ ಪ್ರದೇಶದಲ್ಲಿ ಬಟ್ಟೆ ವ್ಯಾಪಾರಿಯ ಮಗನಾಗಿ ಜನಿಸಿದ ಫಾರೂಕ್ ಕಾಲೇಜಿನಲ್ಲಿರುವ ಸಮಯದಲ್ಲಿ 1987ರಲ್ಲಿ ನಡೆದ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮಗಳು ನಡೆದು ಬಂಡಾಯಕ್ಕೆ ಕಾರಣವಾಯಿತು. ಕಾಲೇಜಿನಲ್ಲಿ ಫಾರೂಕ್ ಖಾನ್, ರಾಜಕೀಯದಲ್ಲಿ ಸಕ್ರಿಯರಾಗಿರುವ ಕೆಲವರ ಜೊತೆ ಗೆಳೆತನ ಬೆಳೆಸಿಕೊಂಡಿದ್ದ. ಚುನಾವಣೆಯ ಸಮಯದಲ್ಲಿ ಓರ್ವ ಗೆಳೆಯ ಸೈಯದ್ ಸಲಾಹುದ್ದೀನ್‌ನ ಚುನಾವಣಾ ಏಜೆಂಟ್ ಆಗಿ ಅವರು ಕಾರ್ಯನಿರ್ವಹಿಸಿದ್ದರು. 1987ರ ಚುನಾವಣೆಯಲ್ಲಿ ಸಲಾಹುದ್ದೀನ್ ಶ್ರೀನಗರದ ಅಮಿರಾ ಕಡಲ್ ಕ್ಷೇತ್ರದಿಂದ ಮುಸ್ಲಿಂ ಯುನೈಟೆಡ್ ಫ್ರಂಟ್ (ಎಂಯುಎಫ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಸಾಮೂಹಿಕ ಅಕ್ರಮದ ಆರೋಪದ ಮಧ್ಯೆಯೇ ಸಲಹುದ್ದೀನ್ ಮತ್ತವರ ಪಕ್ಷ ಚುನಾವಣೆಯಲ್ಲಿ ಸೋಲನುಭವಿಸಿತ್ತು.

ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದು ಸಲಾಹುದ್ದೀನ್ ಪಾಕಿಸ್ತಾನಕ್ಕೆ ಪಲಾಯನ ಮಾಡಿದ. ಅಂದಿನಿಂದ ಆತ ಹಿಜ್ಬುಲ್ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ. ಸಲಾಹುದ್ದೀನ್‌ನನ್ನು ಅಮೆರಿಕ ಜಾಗತಿಕ ಉಗ್ರ ಎಂದು ಹೆಸರಿಸಿದೆ. ಸಲಹುದ್ದೀನ್‌ನಿಂದ ಪ್ರೇರಣೆ ಪಡೆದು ನೂರಾರು ಯುವಕರು ಗಡಿ ದಾಟಿ ಪಾಕಿಸ್ತಾನ ಸೇರಿದ್ದರು ಅವರಲ್ಲಿ   ಫಾರೂಕ್ ಖಾನ್ ಕೂಡಾ ಒಬ್ಬರು. ಪಾಕಿಸ್ತಾನದಲ್ಲಿ ಇವರೆಲ್ಲ ಸಶಸ್ತ್ರ ತರಬೇತಿ ಪಡೆದುಕೊಂಡಿದ್ದರು. ಫಾರೂಕ್ ಖಾನ್‌ರನ್ನು ಪೊಲೀಸರು ಬಂಧಿಸಿ ಅವರು ಏಳು ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಿಡುಗಡೆ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News