ಆಪ್ ನಾಯಕನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ
Update: 2018-10-05 22:43 IST
ಗಾಝಿಯಾಬಾದ್, ಅ.5: ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ಸುಟ್ಟು ಕರಕಲಾದ ಕಾರಿನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಲೋನಿಯಿಂದ ಸಾಹಿಬಾಬಾದ್ ಸಂಪರ್ಕಿಸುವ ಭೋಪ್ರಾ ಎಂಬಲ್ಲಿ ಕಾರು ಪತ್ತೆಯಾಗಿತ್ತು. ದಾರಿಹೋಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಮೃತಪಟ್ಟವರನ್ನು ಆಪ್ ನಾಯಕ ನವೀನ್ ದಾಸ್ ಎಂದು ಗುರುತಿಸಲಾಗಿದೆ.
ಕಾರಿನ ಚಾಲಕ ಸೀಟಿನಲ್ಲಿ ಸುಟ್ಟು ಕರಕಲಾದ ನವೀನ್ ರ ಮೃತದೇಹ ಪತ್ತೆಯಾಗಿದೆ. ಕಾರಿನೊಳಗೆ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಈ ಕೃತ್ಯದ ಹಿಂದೆ ಯಾರದ್ದೋ ಕೈವಾಡವಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಕೃತ್ಯ ಎಸಗಿದವರು ನವೀನ್ ರನ್ನು ಈ ಪ್ರದೇಶಕ್ಕೆ ಕರೆಸಿರಬೇಕು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.