ಅಮೆರಿಕ-ರಶ್ಯ ತಿಕ್ಕಾಟದಲ್ಲಿ ಸಿಲುಕಿಕೊಂಡ ಭಾರತ: ವಿದೇಶಿ ಮಾಧ್ಯಮಗಳಲ್ಲಿ ವರದಿ

Update: 2018-10-05 17:27 GMT

ಹೊಸದಿಲ್ಲಿ, ಅ.5: ಅಮೆರಿಕ ಇತ್ತೀಚೆಗೆ ಅಂಗೀಕರಿಸಿರುವ ‘ಅಮೆರಿಕದ ವಿರೋಧಿಗಳನ್ನು ದಿಗ್ಭಂಧನದ ಮೂಲಕ ಎದುರಿಸುವ ಕಾಯ್ದೆ’(ಸಿಎಎಟಿಎಸ್‌ಎ) ಎದುರಾಳಿಗಳನ್ನು ಶಿಕ್ಷಿಸುವ ಉದ್ದೇಶ ಹೊಂದಿದೆ. ತನ್ನ ಮಿತ್ರರಾಷ್ಟ್ರಗಳನ್ನಲ್ಲ ಎಂದು ಅಮೆರಿಕ ಹೇಳಿಕೆ ನೀಡಿದ್ದರೂ, ಇದೀಗ ರಶ್ಯದಿಂದ ಕ್ಷಿಪಣಿ ಖರೀದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಈ ಎರಡು ದೇಶಗಳ ನಡುವಿನ ತಿಕ್ಕಾಟದಲ್ಲಿ ಸಿಲುಕಿಕೊಂಡಂತಾಗಿದೆ ಎಂದು ವಿದೇಶದ ಮಾಧ್ಯಮಗಳು ವರದಿ ಮಾಡಿವೆ.

ಇದೀಗ ಅಧ್ಯಕ್ಷ ಟ್ರಂಪ್ ಈ ಕಾಯ್ದೆಯಿಂದ ಭಾರತಕ್ಕೆ ವಿನಾಯಿತಿ ನೀಡುವರೇ ಎಂಬುದು ನಿರ್ಣಾಯಕ ಪ್ರಶ್ನೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತದೊಂದಿಗೆ ಯಾವ ರೀತಿಯ ಸಂಬಂಧ ಉಳಿಸಿಕೊಳ್ಳಬೇಕು ಎಂದು ಅಮೆರಿಕ ನಿರ್ಧರಿಸುವ ಸ್ಥಿತಿಯನ್ನು ಭಾರತ ತಂದುಕೊಳ್ಳಬಾರದು ಎಂದು ಬುಷ್ ಆಡಳಿತಾವಧಿಯಲ್ಲಿ ಅಧಿಕಾರಿಯಾಗಿದ್ದ ಆ್ಯಶ್ಲೆ ಟೆಲಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News