1977ರಲ್ಲಿ ನಾಸಾ ಉಡಾಯಿಸಿದ ಶೋಧ ನೌಕೆ ಎಲ್ಲಿಗೆ ತಲುಪಿದೆ ಗೊತ್ತಾ?

Update: 2018-10-06 17:02 GMT

ವಾಶಿಂಗ್ಟನ್, ಅ. 6: 1977ರಲ್ಲಿ ಉಡಾಯಿಸಲಾದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ‘ವಾಯೇಜರ್ 2’ ಶೋಧ ನೌಕೆಯು, ನಮ್ಮ ಸೌರವ್ಯೂಹದ ಹೊರಗೆ ಸೃಷ್ಟಿಯಾಗುವ ಕಾಸ್ಮಿಕ್ ಕಿರಣಗಳಲ್ಲಿ ಹೆಚ್ಚಳವಾಗಿರುವುದನ್ನು ಪತ್ತೆಹಚ್ಚಿದೆ.

ಅಂದರೆ, ಶೋಧ ನೌಕೆಯು ಈಗ ನಕ್ಷತ್ರಗಳ ನಡುವಿನ ಆಕಾಶಕ್ಕೆ ಸಮೀಪದಲ್ಲಿದೆ.

‘ಹೀಲಿಯೊಸ್ಫಿಯರ್’ನ ಅತ್ಯಂತ ಹೊರಗಿನ ಪದರದಿಂದ ‘ವಾಯೇಜರ್ 2’ ಹೊರಹೋದಾಗ, ನಕ್ಷತ್ರಗಳ ನಡುವಿನ ಆಕಾಶವನ್ನು ಪ್ರವೇಶಿಸಿದ ಎರಡನೇ ಮಾನವ ನಿರ್ಮಿತ ಉಪಕರಣವಾಗುತ್ತದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ‘ನಾಸಾ’ ತಿಳಿಸಿದೆ.

‘ವಾಯೇಜರ್ 1’ ಈಗಾಗಲೇ ಈ ದಾಖಲೆಯನ್ನು ನಿರ್ಮಿಸಿದೆ.

ಹೀಲಿಯೊಸ್ಫಿಯರ್ ಅಂದರೆ, ಸೂರ್ಯ ಮತ್ತು ಗ್ರಹಗಳ ಸುತ್ತಲಿನ ವಿಶಾಲ ಪ್ರದೇಶದಲ್ಲಿರುವ ಗುಳ್ಳೆಗಳು. ಇಲ್ಲಿ ಸೌರ ವಸ್ತುಗಳು ಮತ್ತು ಕಾಂತೀಯ ಕ್ಷೇತ್ರಗಳ ಪ್ರಾಬಲ್ಯವಿದೆ.

ಈಗ ‘ವಾಯೇಜರ್ 2’ ಭೂಮಿಯಿಂದ ಸುಮಾರು 1770 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಅಂದರೆ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರದ 118 ಪಟ್ಟು.

ಎಲ್ಲ ನಾಲ್ಕು ದೈತ್ಯ ಬಾಹ್ಯ ಗ್ರಹಗಳಿಗೆ ಭೇಟಿ ನೀಡಿದ ಏಕೈಕ ಶೋಧ ನೌಕೆ ಅದಾಗಿದೆ. ಅದು ಗುರು ಗ್ರಹಕ್ಕೆ 1979ರಲ್ಲಿ ಭೇಟಿ ನೀಡಿದ್ದರೆ, ಶನಿ ಗ್ರಹಕ್ಕೆ 1981, ಯುರೇನಸ್‌ಗೆ 1986 ಮತ್ತು ನೆಪ್ಚೂನ್‌ಗೆ 1989ರಲ್ಲಿ ಭೇಟಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News