×
Ad

ಶಹಬಾಝ್ ಶರೀಫ್‌ಗೆ 10 ದಿನಗಳ ಎನ್‌ಎಬಿ ಕಸ್ಟಡಿ

Update: 2018-10-06 22:44 IST

 ಲಾಹೋರ್, ಅ. 6: 1,400 ಕೋಟಿ ರೂಪಾಯಿ ಗೃಹ ನಿರ್ಮಾಣ ಹಗರಣಕ್ಕೆ ಸಂಬಂಧಿಸಿ, ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಶನಿವಾರ ಪ್ರತಿಪಕ್ಷ ನಾಯಕ ಶಹಬಾಝ್ ಶರೀಫ್‌ರನ್ನು 10 ದಿನಗಳ ಅವಧಿಗೆ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ವಶಕ್ಕೆ ನೀಡಿದೆ.

ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಅಧ್ಯಕ್ಷರನ್ನು ಎನ್‌ಎಬಿ ಶುಕ್ರವಾರ ಬಂಧಿಸಿತ್ತು ಹಾಗೂ ಬೃಹತ್ ಭ್ರಷ್ಟಾಚಾರ ಹಗರಣದಲ್ಲಿ ಅವರನ್ನು ಪ್ರಶ್ನಿಸಿಲು 15 ದಿನಗಳ ಕಾಲ ತನ್ನ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿತ್ತು.

67 ವರ್ಷದ ಶಹಬಾಝ್ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ತಮ್ಮ. ನವಾಝ್ ಶರೀಫ್ ಕೂಡ ಈಗಾಗಲೇ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News